ಹಿರಿಯ ಪತ್ರಕರ್ತ ಆಲ್ಫಿ ಡಿಸೋಜ ನಿಧನ

ಮಂಗಳೂರು, ಜೂ.26: ಇಲ್ಲಿನ ಕದ್ರಿ ನಿವಾಸಿ ಆಲ್ಫಿ ಎಂದೇ ಖ್ಯಾತರಾಗಿದ್ದ ಹಿರಿಯ ಪತ್ರಕರ್ತ ಆಲ್‌ಫ್ರೆಡ್ ಡಿ ಸೋಜ(64) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
30 ವರ್ಷಗಳ ಕಾಲ ಅಮೆರಿಕಾದಲ್ಲಿದ್ದ ಆಲ್ಫಿ ಡಿಸೋಜ ಬಳಿಕ 2012ರಲ್ಲಿ ಮಂಗಳೂರಿಗೆ ವಾಪಸಾಗಿ ಹವ್ಯಾಸಿ ಪತ್ರಕರ್ತರಾಗಿ ‘ಮಂಗಳೂರಿಯನ್ ಡಾಟ್ ಕಾಮ್’ ಸೇರಿದ್ದರು. ಬಳಿಕ ಅದೇ ಸಂಸ್ಥೆಯಲ್ಲಿ ವರದಿಗಾರರಾಗಿ 12 ಕಾಲ ಸೇವೆ ಸಲ್ಲಿಸಿದ್ದರು. ಅವರು ಇಬ್ಬರು ಸಹೋದರರನ್ನು ಅಗಲಿದ್ದಾರೆ.
Next Story





