ಮಂಗಳೂರು: ಲೋಕಾಯುಕ್ತರಿಂದ ತಪಾಸಣೆ

ಮಂಗಳೂರು, ಜೂ.29: ಮಂಗಳೂರು ಭೂ ಮಾಪನಾ ಇಲಾಖೆಯ ಅಧಿಕಾರಿ(ಡಿಡಿಎಲ್‌ಆರ್) ಮತ್ತು ಇಬ್ಬರು ಸರ್ವೆಯರ್ ಗಳ ಕಚೇರಿ ಹಾಗೂ ಮನೆಗಳಲ್ಲಿ ಶನಿವಾರ ಮಂಗಳೂರು ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿದ ಬಗ್ಗೆ ವರದಿಯಾಗಿದೆ.
ಮಂಗಳೂರು ಡಿಡಿಎಲ್‌ಆರ್ ಕಚೇರಿ ಮತ್ತು ದೇರಳಕಟ್ಟೆ ಬಳಿಯಿರುವ ಉಳ್ಳಾಲದ ಸರ್ವೆಯರ್ ಕಚೇರಿಯಲ್ಲಿ ತಪಾಸಣೆ ನಡೆಸಲಾಗಿದೆ. ಅದಲ್ಲದೆ ಅಧಿಕಾರಿ ಮತ್ತು ಸರ್ವೆಯರ್‌ಗಳಿಗೆ ಸೇರಿದ ಬಂಟ್ವಾಳ, ಸೋಮೇಶ್ವರ, ಮಂಗಳೂರು ನಗರ ಮತ್ತು ಕಾರ್ಕಳದ ಮನೆಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Next Story





