ಪಂಪ್ವೆಲ್ನಲ್ಲಿ ಕಳವು ಪ್ರಕರಣ: ಪೊಲೀಸರಿಗೆ ಸುಳಿವು ಲಭ್ಯ
ಮಂಗಳೂರು: ನಗರದ ಪಂಪ್ವೆಲ್ ಸಮೀಪದ ಬಿ.ಎಚ್. ಜನರಲ್ ಸ್ಟೋರಿಗೆ ನುಗ್ಗಿ 10ಲಕ್ಷ ರೂ. ನಗದು ದೋಚಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭಿಸಿದ್ದು, ಶೀಘ್ರ ಬಂಧಿಸುವ ಸಾಧ್ಯತೆಯಿದೆ.
ಪಂಪ್ವೆಲ್ನಲ್ಲಿರುವ ಲೋಟಸ್ ಗ್ಯಾಲಕ್ಸಿಯ ನೆಲಮಹಡಿಯಲ್ಲಿರುವ ಜನರಲ್ ಸ್ಟೋರಿಗೆ ಸೋಮವಾರ ರಾತ್ರಿ 11:35ರ ಸುಮಾರಿಗೆ ಕಳ್ಳರು ನುಗ್ಗಿದ್ದರು. ಸಾಧನವೊಂದನ್ನು ಬಳಸಿ ಶಟರ್ ಮುರಿದು ಒಳಪ್ರವೇಶಿಸಿದ ಕಳ್ಳರು ಅಂಗಡಿಯ ಡ್ರಾವರ್ನಲ್ಲಿದ್ದ 10ಲಕ್ಷ ನಗದನ್ನು ದೋಚಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳರ ಚಹರೆ ಪತ್ತೆಯಾಗಿದೆ. ಕೇಸು ದಾಖಲಿಸಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಶೀಘ್ರ ಬಂಧನವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
Next Story