ಯುಎಇ: ಉದ್ಯೋಗಾವಕಾಶಕ್ಕೆ ಅರ್ಜಿ ಆಹ್ವಾನ
ಮಂಗಳೂರು, ಜು.11: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆಎಸ್ಡಿಸಿ) ಅಧೀನದಲ್ಲಿ ಬರುವ ಅಂತಾರಾಷ್ಟ್ರೀಯ ವಲಸಿಗರ ಕೇಂದ್ರ ಮುಖಾಂತರ ಗಲ್ಫ್ (ಯಎಇ) ದೇಶದಲ್ಲಿ ಸ್ಟೀಲ್ ಫಿಕ್ಸರ್, ಮೇಸ್ತ್ರಿ, ಕಾರ್ಪೆಂಟರ್, ಅಲ್ಯುಮಿನಿಯಂ ಫ್ಯಾಬ್ರಿಕೆಟರ್, ಫರ್ನಿಚರ್ ಕಾರ್ಪೆಂಟರ್, ಫರ್ನಿಚರ್ ಪೈಂಟರ್, ಪ್ಲಂಬರ್, ಎಸಿ ಟೆಕ್ನಿಷಿಯನ್, ಡಕ್ಟ್ಮ್ಯಾನ್, ಹೆಲ್ಪರ್ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಎಸೆಸೆಲ್ಸಿ ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಸತಿ ಸೌಲಭ್ಯ ಮತ್ತು ಕೆಲಸ ಮಾಡುವ ಸ್ಥಳಕ್ಕೆ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಜು.20ರಂದು ಬೆಂಗಳೂರಿನಲ್ಲಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಬಯೋಡೇಟವನ್ನು ಇಮೇಲ್ ವಿಳಾಸ hr.imck@gmail.com