ಮುಡಿಪು: ಸರಕಾರಿ ಮೆಡಿಕಲ್ ಕಾಲೇಜ್‌ಗಾಗಿ ಜಾಗೃತಿ ಕಾರ್ಯಕ್ರಮ

ಮಂಗಳೂರು: ದ.ಕ.ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜ್ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕಳೆದ ಎರಡು ವಾರ ದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಾತೀತವಾಗಿ ನಡೆಯುವ ಅಭಿಯಾನಕ್ಕೆ ವಿವಿಧೆಡೆ ಪೂರಕ ಬೆಂಬಲ ವ್ಯಕ್ತವಾಗು ತ್ತಿದೆ. ದ.ಕ.ಜಿಲ್ಲಾ ಆಟೋ ರಾಜಕನ್ಮಾರ್ ಯುನಿಯನ್ (ರಿ), ಕರಾವಳಿ ಆಟೋ ಪಾರ್ಕ್ (ರಿ)ಮುಡಿಪು, ಪಬ್ಲಿಕ್ ವಾಯ್ಸ್ ವಾಟ್ಸಪ್ ಬಳಗದ ಸಹಯೋಗದೊಂದಿಗೆ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಂತೆ ಒತ್ತಾಯಿಸಿ ಬುಧವಾರ ಮುಡಿಪು ಜಂಕ್ಷನ್‌ನಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿ ಹೋರಾಟಗಾರ ಮುಸ್ತಫಾ ವಿಟ್ಲ, ಕರಾವಳಿ ಆಟೋ ಪಾರ್ಕ್‌ನ ಕೋಶಾಧಿಕಾರಿ ಅಬ್ದುಲ್ ಜಲೀಲ್, ಸಾಮಾಜಿಕ ಕಾರ್ಯಕರ್ತ ಸೋಶಿಯಲ್ ಫಾರೂಕ್ ಮಾತನಾಡಿದರು.
ಪಬ್ಲಿಕ್ ವಾಯ್ಸ್ ಅಡ್ಮಿನ್ ಬಳಗದ ಕಾರ್ಯನಿರ್ವಾಹಕ ಮತ್ತು ಎಂಎನ್‌ಐ ಫೌಂಡೇಶನ್ (ರಿ)ನ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಕೆದುಂಬಾಡಿ, ಆಟೋ ರಾಜಕನ್ಮಾರ್ ಸಂಘಟನೆಯ ಜಿಲ್ಲಾಧ್ಯಕ್ಷ ಸಿದ್ದೀಕ್ ಮುಡಿಪು ಹಾಗೂ ಸಾಮಾಜಿಕ ಹೋರಾಟಗಾರರು, ಅಟೋ ಚಾಲಕ ಮಾಲಕರು, ಸಾರ್ವಜನಿಕರು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.





