ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟಕ್ಕೆ ಆಯ್ಕೆ

ಹುಸೈನ್ ಕಾಟಿಪಳ್ಳ
ಮಂಗಳೂರು: ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟ ದ.ಕ. ಮತ್ತು ಉಡುಪಿ ಇದರ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ನ್ಯಾಷನಲ್ ಟ್ಯುಟೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಆಡಳಿತ ಸಮಿತಿಯ ಅಧ್ಯಕ್ಷರಾಗಿ ಹುಸೈನ್ ಕಾಟಿಪಳ್ಳ ಪುನರಾಯ್ಕೆಗೊಂಡರು. ಗೌರವಾಧ್ಯಕ್ಷರಾಗಿ ಯು.ಹೆಚ್. ಖಾಲಿದ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಸಮದ್ ಕಾಟಿಪಳ್ಳ, ಉಪಾಧ್ಯಕ್ಷರಾಗಿ ಅಝೀಝ್ ಕಂದಾವರ, ಸಂಚಾಲಕರಾಗಿ ಅಶ್ರಫ್, ಕೋಶಾಧಿಕಾರಿಯಾಗಿ ಅಶ್ಫಕ್ ಅಹ್ಮದ್, ಸಂಘಟನಾ ಕಾರ್ಯದರ್ಶಿಯಾಗಿ ಶರೀಫ್ ಪರ್ಲಿಯಾ, ಜೊತೆ ಕಾರ್ಯದರ್ಶಿಯಾಗಿ ರಶೀದ್ ಗಡಿಯಾರ್ ಆಯ್ಕೆಯಾಗಿದ್ದಾರೆ.
Next Story





