ತೊಕ್ಕೊಟ್ಟು: ವ್ಯಕ್ತಿ ನಾಪತ್ತೆ

ಮಂಗಳೂರು,ಜು.27:ಉಳ್ಳಾಲ ಗ್ರಾಮದ ತೊಕ್ಕೊಟ್ಟು ಒಳಪೇಟೆಯ ನಿವಾಸಿ ಶ್ಯಾಮ್ (43) ಎಂಬವರು ಮೇ 13ರಿಂದ ಕಾಣೆಯಾಗಿದ್ದಾರೆ.
ಅಂದು ಸಂಜೆ 6ಕ್ಕೆ ಮನೆಯಿಂದ ಹೊರಗೆ ಹೋದವರು ಈತನಕ ಮರಳಿ ಬಂದಿಲ್ಲ. ಇವರು ಬಳಸುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಎಲ್ಲೆಡೆ ಹುಡುಕಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
5.4 ಅಡಿ ಎತ್ತರದ, ಎಣ್ಣೆಕಪ್ಪು ಮೈಬಣ್ಣದ, ದುಂಡ ಮುಖದ, ತಮಿಳು, ಮಲಯಾಳಂ. ಕನ್ನಡ, ತುಳು ಮಾತನಾಡಬಲ್ಲ ಇವರನ್ನು ಕಂಡವರು ಪೊಲೀಸ್ ಕಂಟ್ರೋಲ್ ರೂಂ: 0824-2220800 ಅಥವಾ ಉಳ್ಳಾಲ ಠಾಣೆ :0824-2466269ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





