ಪಡುಬಿದ್ರಿ: ನಡಿಪಟ್ಣ ಕಡಲ್ಕೊರೆತ ಪ್ರದೇಶಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ

ಪಡುಬಿದ್ರಿ: ರಾಜ್ಯದ ಕರಾವಳಿ ತೀರದಲ್ಲಿ ಉಂಟಾಗುತ್ತಿರುವ ಕಡಲ್ಕೊರೆತ ತಡೆಗೆ ತಾತ್ಕಾಲಿಕ ಕಾಮಗಾರಿಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ತಲಾ ರೂ. 5 ಕೋಟಿಯಂತೆ ಒಟ್ಟು 15 ಕೋಟಿ ರೂ. ಬಿಡುಗಡೆಗೆ ಸಿದ್ಧತೆ ನಡೆಸಿದ್ದು, ಅದರಲ್ಲಿ ಪಡುಬಿದ್ರಿಯಲ್ಲಿ ಕಡಲ್ಕೊರೆತ ಹಾನಿಗೊಳಗಾದ ಪ್ರದೇಶಕ್ಕೆ 1 ಕೋಟಿ ರೂ. ನೀಡುವುದಾಗಿ ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ವೈದ್ಯ ಭರವಸೆ ನೀಡಿದರು.
ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ನ ಭಾಗದ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಈಗಾಗಲೇ ರಾಜ್ಯದ 320 ಕಿಮೀ ವ್ಯಾಪ್ತಿಯಲ್ಲಿ ಶಾಶ್ವತ ತಡೆಗೋಡೆಗಾಗಿ 480 ಕೋಟಿ ರೂ. ವೆಚ್ದದ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಅದು ಇನ್ನೂ ಬಿಡುಗಡೆಯಾಗಿಲ್ಲ. ಕೇಂದ್ರ ಸರಾರದ ಅನುದಾನ ಬಿಡಗಡೆಗೊಳಿಸುವ ಪ್ರಯತ್ನ ನಡೆಸುತಿದ್ದೇನೆ. ಅದರೊಂದಿಗೆ ವಿಶ್ವ ಬ್ಯಾಂಕ್ ಅಥವಾ ವಿವಿಧ ಅನುದಾನಳನ್ನು ಕ್ರೂಡೀಕರಿಸಿ ಮುಂದ ಶಾಶ್ವತ ತಡಗೋಡೆಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಅವರು ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಡಲ್ಕೊರೆತದಿಂದ ಅನೇಕ ತೆಂಗಿನ ಮರಗಳು ಸಮುದ್ರದ ಪಾಲಾಗಿದ್ದು ಜೊತೆಗೆ ನಡಿಪಟ್ನ ಬ್ಲೂ ಫ್ಲಾಗ್ ಬೀಚ್ ಸಂಪರ್ಕ ರಸ್ತೆಗೂ ಹಾನಿ ಉಂಟಾಗಿದೆ ಕಡಲ್ಕೊರೆತ ತಡೆಗೆ ತಕ್ಷಣದಲ್ಲಿ ಅನುದಾನ ಮಂಜೂರು ಮಾಡುವಂತೆ ಸಚಿವರಿಗೆ ಮನವಿ ಮಾಡಿದರು.
ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ, , ಸದಸ್ಯರಾದ ವಿದ್ಯಾ ಶ್ರೀ, ಯಶೋಧಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ನೀತಾ ಗುರುರಾಜ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್, ನಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಗಂಗಾಧರ ಕರ್ಕೇರ, ಗುತ್ತಿಗೆದಾರ ಕಿಶೋರ್ ಕುಮಾರ್ ಗುರ್ಮೆ, ಬ್ಲೂಫ್ಲಾö್ಯಗ್ ಬೀಚ್‌ನ ಪ್ರಬಂಧಕ ವಿಜಯ ಶೆಟ್ಟಿ ಮತ್ತಿತರರು ಇದ್ದರು.







