ಕಿನ್ಯ: ಸಯ್ಯಿದ್ ಅಲವಿ ತಂಙಳ್ ಅನುಸ್ಮರಣೆ

ಮಂಗಳೂರು : ಇತ್ತೀಚೆಗೆ ಅಗಲಿದ ಕಿನ್ಯ ಸಯ್ಯಿದ್ ಅಲವಿ ತಂಙಳ್ ರವರ ಅನುಸ್ಮರಣೆ ಶನಿವಾರ ಕರ್ನಾಟಕ ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಯೀಲ್ ಹಾಜಿ ಪರಮಾಂಡ ಅಧ್ಯಕ್ಷತೆಯಲ್ಲಿ ರಾಜ್ಯ ನಾಯಕ ಕೆ.ಎಚ್ ಇಸ್ಮಾಯೀಲ್ ಸಅದಿ ಉದ್ಘಾಟಿಸಿದರು.
ಸುರಿಬೈಲ್ ಅಶ್‌ಅರಿಯ್ಯಾದ ಮುಹಮ್ಮದ್ ಅಲಿ ಸಖಾಫಿ ಅನುಸ್ಮರಣಾ ಪ್ರಭಾಷಣ ನಡೆಸಿದರು, ಸಯ್ಯಿದ್ ಝೈನುಲ್ ಆಬಿದೀನ್ ಸಅದಿ ತಂಳ್ ಪ್ರಾರ್ಥನೆಗೆ ನೇತೃತ್ವ ನೀಡಿದರು.
ಮುಸ್ಲಿಮ್ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಯೀಲ್ ಹಾಜಿ ಸಾಗ್, ಕೋಶಾಧಿಕಾರಿ ಎಂಕೆಎಂ ಇಸ್ಮಾಯೀಲ್ ಮೀಂಪ್ರಿ, ಅಬ್ಬಾಸ್ ಹಾಜಿ ಎಲಿಮಲೆ ಸಹಿತ ಕಿನ್ಯ ಪ್ರದೇಶದ ಮುಸ್ಲಿಮ್ ಜಮಾಅತ್,ಎಸ್‌ವೈಎಸ್ ಮತ್ತು ಎಸ್‌ಎಸ್‌ಎಫ್‌ನ ನಾಯಕರು ಮತ್ತಿತರರು ಭಾಗವಹಿಸಿದ್ದರು.
Next Story





