ಪ್ರಭಾಕರ ಅಡಿಗರಿಗೆ ವಿಜಯದಶಮಿ ಗೌರವ ಪ್ರದಾನ

ಮಂಗಳೂರು: ಆಸ್ತಿ, ಸಂಪತ್ತು, ಅಧಿಕಾರ ಇವೆಲ್ಲವುಗಳಿಂದಲೂ ಜ್ಞಾನ ಸಂಪತ್ತೇ ಮಿಗಿಲಾದುದು. ಈ ನೆಲೆಯಲ್ಲಿ ಚತುರ್ವೇದ ಪಂಡಿತ ಡಾ.ಪ್ರಭಾಕರ ಅಡಿಗರು ತನ್ನ ಜ್ಞಾನ ಸಂಪತ್ತಿನಿಂದ ಬಹುಮಾನ್ಯತೆಯನ್ನು ಪಡೆದಿದ್ದಾರೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.
ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯಲ್ಲಿರುವ ಮಂಜುಪ್ರಾಸಾದದ ವಾದಿರಾಜ ಮಂಟಪದ ವಿಶ್ವೇಶತೀರ್ಥ ವೇದಿಕೆಯಲ್ಲಿ ಕಲ್ಕೂರ ಪ್ರತಿಷ್ಠಾನ ಆಯೋಜಿಸಿದ್ದ ವಿದ್ಯಾರಂಭ- ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಡಾ. ಅಡಿಗರಿಗೆ ‘ ವಿಜಯ ದಶಮಿ ಗೌರವ ಣ’ ಪ್ರದಾನ ಮಾಡಿ ಅವರು ಮಾತನಾಡಿದರು.
ಗೌರವ ಸ್ವೀಕರಿಸಿದ ಮಾತನಾಡಿದ ಡಾ. ಪ್ರಭಾಕರ ಅಡಿಗರು ವೇದಾಧ್ಯಯನದಿಂದ ಮೊದಲ್ಗೊಂಡು ವಿಜ್ಞಾನದವರೆಗಿನ ಪ್ರತಿಯೊಂದು ಜ್ಞಾನವನ್ನು ಯುವ ಪೀಳಿಗೆಯು ಸಂಪಾದಿಸಿಕೊಳ್ಳುವ ಮೂಲಕ ಸಾಧನೆಯನ್ನು ಮಾಡಬೇಕೆಂದರು.
ಯಕ್ಷಗಾನ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ಕಾರ್ಯಕ್ರಮದ ಆರಂಭದಲ್ಲಿ ಸುಮಿತ್ರಾ ಮತ್ತು ತಂಡದಿಂದ ಭಜನೆ ನಡೆಯಿತು. ಪ್ರೊ.ಜಿ. ಕೆ. ಭಟ್ ಸೇರಾಜೆ, ಶಿವಪ್ರಸಾದ್ ಪ್ರಭು, ಸುಧಾಕರ ರಾವ್ ಪೇಜಾವರ, ಶಶಿಪ್ರಭಾ ಐತಾಳ್, ವಿನೋದಾ ಕಲ್ಕೂರ, ವಿದ್ಯಾಶ್ರೀ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ದಯಾನಂದ ಕಟೀಲ್ ಸ್ವಾಗತಿಸಿದರು, ಪೂರ್ಣಿಮಾ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.







