ಹಿರಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಉಳ್ಳಾಲ: ಬಬ್ಬುಕಟ್ಟೆಯ ಹಿರಾ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ನಡೆಯಿತು.
ಬಿ.ಇಡಿ ಕಾಲೇಜಿನ ಉಪನ್ಯಾಸಕ ಡಾ.ಎನ್.ಶಿವಪ್ರಕಾಶ್ ಮತ್ತು ಅವರ ತಂಡವು ತರಗತಿಯಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಕಲಿಕೆ ಬಗ್ಗೆ ತರಬೇತಿ ನೀಡಿದರು.
ಉಡುಪಿಯ ಡಯಟ್ ಉಪ ಪ್ರಾಂಶುಪಾಲ ಡಾ.ಅಶೋಕ್ ಕಾಮತ್ ವೃತ್ತಿ ಮತ್ತು ಕೆಲಸದ ವ್ಯತ್ಯಾಸಗಳ ಬಗ್ಗೆ ಮಾಹಿತಿ ನೀಡಿದರು.
ಎ.ವಿ. ಬಾಳಿಗಾ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ವಿರೂಪಾಕ್ಷ ದೇವರಮನೆ ವಿಚಾರ ಮಂಡಿಸಿದರು.
ಹಿರಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎ.ಎಚ್.ಮಹ್ಮೂದ್, ಕಾರ್ಯದರ್ಶಿ ಅಬ್ದುಲ್ ಕರೀಂ, ಸಂಚಾಲಕ ರಹ್ಮತುಲ್ಲಾ, ಶಾಲಾ ಪಿ.ಆರ್.ಓ. ನಿಝಾಮುದ್ದೀನ್, ಹಿರಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಫಾತಿಮಾ ಮೆಹರೂನ್, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಮಂಜುಳಾ ಉಪಸ್ಥಿತರಿದ್ದರು.
ಸಹ ಶಿಕ್ಷಕಿ ಹಸೀನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
Next Story





