Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ನಂತೂರು - ಸುರತ್ಕಲ್‌ ಹೆದ್ದಾರಿಯ ಸಮಸ್ಯೆ...

ನಂತೂರು - ಸುರತ್ಕಲ್‌ ಹೆದ್ದಾರಿಯ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕೂಳೂರು ಸೇತುವೆ ಬಳಿ ಧರಣಿ ಸತ್ಯಾಗ್ರಹ

ವಾರ್ತಾಭಾರತಿವಾರ್ತಾಭಾರತಿ26 Nov 2024 9:48 PM IST
share
ನಂತೂರು - ಸುರತ್ಕಲ್‌ ಹೆದ್ದಾರಿಯ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಕೂಳೂರು ಸೇತುವೆ ಬಳಿ ಧರಣಿ ಸತ್ಯಾಗ್ರಹ

ಮಂಗಳೂರು: ನಂತೂರು - ಸುರತ್ಕಲ್‌ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಟೋಲ್‌ ಗೇಟ್‌ ಹೋರಾಟ ಸಮಿತಿ ಸುರತ್ಕಲ್‌ ವಿವಿಧ ಜನಪರ ಸಂಘಟನೆಗಳ ಸಹಯೋಗದೊಂದಿಗೆ ಕೂಳೂರು ಸೇತುವೆ ಬಳಿ ಮಂಗಳವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿತು.

ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಟೋಲ್‌ ಗೇಟ್‌ ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಅವರು, ನಂತೂರು - ಸುರತ್ಕಲ್‌ ಹೆದ್ದಾರಿ ಅನೇಕ ಸಮಸ್ಯೆಗಳ ಆಗರವಾಗಿದೆ. ರಾಷ್ಟ್ರೀಯ ಹೆದ್ದಾರಿಯನ್ನು ಪ್ರತೀ ವರ್ಷ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ಡಾಮರೀಕರಣ ಮಾಡಬೇಕೆನ್ನುವ ನಿಯಮವಿದೆ. ಈ ಹೆದ್ದಾರಿ ಅತ್ಯಂತ ವಾಹನ ದಟ್ಟನೆಯ ಹೆದ್ದಾರಿಗಳಲ್ಲಿ ಒಂದು. ಇಲ್ಲಿ ಮಳೆಗಾಲದ ನಂತರ ಕಾಟಾಚಾರಕ್ಕೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಹೊರತು ಕಳೆದ 6ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ವೈಜ್ಞಾನಿಕ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಡಾಮರೀಕರಣ ಮಾಡಲಾಗಿಲ್ಲ. ಗುಂಡಿಗಳಿಗೆ ನೂರಾರು ಜನ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯ ಸಂಪೂರ್ಣ ದುರಸ್ತಿಗೊಳಿಸಿ ಡಾಮರೀಕರಣ ಮಾಡಬೇಕು. ಕೂಳೂರಿನ ಕಮಾನು ಸೇತುವೆ ಮುಚ್ಚಲು ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿ 4 ವರ್ಷಗಳಾದರೂ ಹೊಸ ಸೇತುವೆಯ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ನಂತೂರು ಮೇಲ್ಸೇತುವೆಯನ್ನು ಕಾಲಮಿತಿ ಯಲ್ಲಿ ಪೂರ್ಣಗೊಳಿಸಬೇಕು ಎಂಬುವುದು ನಮ್ಮ ಬೇಡಿಕೆ ಎಂದರು.

ಬಳಿಕ ಮಾತನಾಡಿದ ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅವರು, ಮುಕ್ಕದಿಂದ ನಂತೂರು ಮತ್ತು ನಂತೂರು- ಬಿಸಿರೋಡ್‌ ವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣವೇ ಕಷ್ಟಕರ. ಹೆದ್ದಾರಿಯ ನಿರ್ವಹಣೆ ಮಾಡಲಾಗುತ್ತಿಲ್ಲ. ರಸ್ತೆ ಹೊಂಡಗುಂಡಿಗಳಿಂದ ತುಂಬಿದ್ದರೂ ಅವಗಳನ್ನು ಮುಚ್ಚುವ ಕಾರ್ಯವನ್ನು ಕೆಲವೊಂದು ಕಡೆ ಗಳಲ್ಲಿ ಮಾಡಿದ್ದಾರೆ. ಹೆದ್ದಾರಿ ಸಾರ್ವಜನಿಕರ ಉಪಯೋಗಕ್ಕೆ ಸಿಗುತ್ತಿಲ್ಲ. ಹೆದ್ದಾರಿಯ ಹಲವೆಡೆ ರಸ್ತೆ ಬ್ಲಾಕ್‌ ಆಗುತ್ತಿವೆ. ಗುಂಡಿ ಮುಚ್ಚುವ ಬದಲಾಗಿ ಸಂಪೂರ್ಣ ಹೆದ್ದಾರಿಗೆ ಡಾಂಬರೀಕರಣ ಮಾಡಬೇಕು. ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅವಕಾಶ ನೀಡಬೇಕು. ಗುಂಡಿಗಳಿಂದಾಗುತ್ತಿರುವ ಅಪಘಾತಗಳಿಗೆ ಮುಕ್ತ ನೀಡಬೇಕೆಂದು ಆಗ್ರಹಿಸಿ ಒಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ವಿವಿಧ ರೀರಿಯಲ್ಲಿ ಪ್ರತಿಭಟನೆಗಳು ಮುಂದುವರಿಯಲಿದೆ ಎಂದರು.

ಪ್ರತಿಭಟನೆಯಲ್ಲಿ ಟೋಲ್‌ ಗೇಟ್‌ ಹೋರಾಟ ಸಮಿತಿಯ ಸಹ ಸಂಚಾಲಕರಾದ ರಾಘವೇಂದ್ರ ರಾವ್‌, ಪ್ರತಿಭಾ ಕುಳಾಯಿ, ಸಿಪಿಎಂ ಮುಖಂಡ ಸುನಿಲ್‌ ಕುಮಾರ್‌ ಬಜಾಲ್‌, ಡಿ.ಎಸ್‌.ಎಸ್‌. ಮುಖಂಡರಾದ ‌ಎಂ ದೇವದಾಸ್, ರಘು ಎಕ್ಕಾರು, ಮಾಜಿ ಉಪಮೇಯರ್ ಗಳಾದ ಮುಹಮ್ಮದ್ ಕುಂಜತ್ತಬೈಲ್, ಬಿ.ಕೆ. ಇಮ್ತಿಯಾಜ್, ಮೂಸಬ್ಬ ಪಕ್ಷಿಕೆರೆ, ರಮೇಶ್ ಟಿ.ಎನ್., ಸದಾಶಿವ ಶೆಟ್ಟಿ, ರಾಜೇಶ್ ಕುಳಾಯಿ, ಅದ್ದು ಕೃಷ್ಣಾಪುರ, ಮಾಜಿ ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಡಿವೈಎಫ್ಐ ನ ಮಕ್ಸೂದ್ ಬಿ.ಕೆ., ಪ್ರಮೀಳಾ ಕೆ, ಮಹಿಳಾ ಕಾಂಗ್ರೆಸ್ ನ ಶಶಿಕಲಾ, ಹೋರಾಟ ಸಮಿತಿಯ ಪ್ರಮುಖರಾದ ಆಶಾ ಬೋಳೂರು, ಗಂಗಾಧರ ಬಂಜನ್ ಶಮೀರ್ ಕಾಟಿಪಳ್ಳ, ಸಲೀಂ ಶ್ಯಾಡೋ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಹಾಜರಿದ್ದರು. ಶ್ರೀನಾಥ್ ಕುಲಾಲ್ ಸ್ವಾಗತಿಸಿದರು.

ನಾವು ಶಾಂತಿಯುತ ರೀತಿಯಲ್ಲಿ ನಡೆಸಲು ಉದ್ದೇಶಿಸಿದ್ದ ಧರಣಿಗೆ ಅವಕಾಶ ನೀಡುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದ್ದೆವು. 12 ದಿನಗಳ ಬಳಿಕ ಕೊನೇಯಗಳಿಗೆಯಲ್ಲಿ ಅನುಮತಿ ನಿರಾಕರಿಸಿರುವುದಾಗಿ ತಿಳಿಸಿದ್ದಾರೆ. ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ ಪ್ರತಿಭಟನೆಗಳನ್ನು ಮಂಗಳೂರು ಕ್ಲಾಕ್‌ ಟವರ್‌ ಬಳಿ ಮಾತ್ರ ಮಾಡಬೇಕೆಂದು ಸರ್ವಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ. ಇಂದು ಬೆಳಗ್ಗೆ ಪೊಲೀಸರು ಮನೆಗೆ ಬಂದು ತಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಮೂಲಕ ಮಂಗಳೂರಿನಲ್ಲಿ ಪೊಲೀಸ್‌ ರಾಜ್ಯ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಬಿಜೆಪಿಯವರಿಗೆ ಬೇಜಾರಾಗುವಂತಹಾ ಯಾವುದೇ ಕಾರ್ಯಕ್ರಮಕ್ಕೂ ಪೊಲೀಸ್‌ ಆಯುಕ್ತರು ಅವಕಾಶ ನೀಡುತ್ತಿಲ್ಲ. ಸುರತ್ಕಲ್‌ ನಲ್ಲಿ ಬಿಜೆಪಿ ಶಾಸಕರೇ ರಸ್ತೆ ಬಂದ್‌ ಮಾಡಿ ಪೊಲೀಸರ ಅನುಮತಿಯನ್ನೂ ಪಡೆಯದೆ ಎರಡು ದಿನಗಳ ಕಾಲ ಕಾರ್ಯಕ್ರಮ ಮಾಡಿದ್ದಾರೆ. ಆದರೂ ಅದನ್ನು ತಡೆಯುವ ಕೆಲಸವಾಗಲೀ, ಕನಿಷ್ಠ ನೋಟಿಸ್‌ ನೀಡುವ ಪ್ರಯತ್ನವನ್ನೂ ಮಾಡಿಲ್ಲ. ಎಬಿವಿಪಿ ಕೊಣಾಜೆಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಅದಕ್ಕೆಲ್ಲಾ ಅವಕಾಶ ನೀಡುವ ಅವರು, ಶಾಸಕರು, ಸಂಸದರಿಗೆ ಅವರ ಜವಾನ್ದಾರು. ಇವುಗಳನ್ನು ತಿಳಿಹೇಳುವ ಧರಣಿಗಳಿಗೆ ಅವಕಾಶ ನೀಡುತ್ತಿಲ್ಲ. ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ಅವರು ಸಹಿಸುತ್ತಿಲ್ಲ. ಬಿಜೆಪಿ ವಿರುದ್ಧ ಮಾತನಾಡಿದ್ದಕ್ಕೆ ಎರಡೆರಡು ಪ್ರಕರಣ ದಾಖಲಿಸಿದ್ದಾರೆ.

ಧರಣಿ ನಡೆಸಿದರೆ ಇಂದೂ ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಬಿಜೆಪಿ ಶಾಸಕರು, ಸಂಸದರ ಸೂಚನೆಯಂತೆ ಅವರ ಕಾರ್ಯನಿರ್ವಹಿಸಲು ಪೊಲೀಸ್‌ ಆಯುಕ್ತರು ಇರುವುದಲ್ಲ. ಅವರ ಈ ನಡೆಯನ್ನು ಟೋಲ್‌ ಗೇಟ್‌ ಹೋರಾಟ ಸಮಿತಿ ಖಂಡಿಸುತ್ತದೆ. ಐಪಿಎಸ್‌ ತರಗಳಿಗಳಲ್ಲಿ ಜನರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕೆನ್ನುವ ತರಗತಿಗಳನ್ನು ಪಡೆದುಕೊಂಡೂ ಅನಾಗರೀಕರಂತೆ ವರ್ತಿಸುತ್ತಿರುವ ಪೊಲೀಸ್‌ ಆಯುಕ್ತರಿಗೆ ನಾಚಿಕೆಯಾಗಬೇಕು. ಓರ್ವ ಕಾನ್‌ ಸ್ಟೇಬಲ್‌ ಗೆ ಇರುವಷ್ಟು ಸಾಮಾನ್ಯ ಜ್ಞಾನವೂ ಓರ್ವ ಐಪಿಎಸ್‌ ಅಧಿಕಾರಿ ಪೊಲೀಸ್‌ ಆಯುಕ್ತರಿಗೆ ಇಲ್ಲ. ಇಲ್ಲಿನ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಆಯುಕ್ತರು ಮೌನವಾಗಿದ್ದಾರೆ. ಜನಪರ ಪ್ರತಿಭಟನೆಗಳು ಕ್ಲಾಕ್‌ ಟವರ್‌ ಬಳಿ ಮಾತ್ರ ಮಾಡಬೇಕೆನ್ನುವುದಾದರೆ ಅಕ್ರಮ ದಂಧೆಗಳನ್ನೂ ಅಲ್ಲೇ ಸಾಲಾಗಿ ಮಾಡಿಸಲಿ ಎಂದು ಮುನೀರ್‌ ಕಾಟಿಪಳ್ಳ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

"ಮಂಗಳೂರಿನ ಜನ ಚಳವಳಿಯ ಇತಿಹಾಸ ಪೊಲೀಸ್‌ ಆಯುಕ್ತ‌ ಅನುಪಮ್‌ ಅಗರ್ವಾಲ್‌ ಅವರಿಗೆ ತಿಳಿದಿಲ್ಲ. ಬಿಜೆಪಿ ಸರಕಾರದ ನೀತಿಗಳನ್ನು ಆಯುಕ್ತರು ಕಾಂಗ್ರೆಸ್‌ ಸರಕಾರದ ಸಮಯದಲ್ಲಿ ಜಾರಿಗೆ ತರಲು ಮುಂದಾಗುತ್ತಿದ್ದಾರೆ. ಅವರ ಇಂತಹಾ ಕೃತ್ಯಗಳು ಕಾಂಗ್ರೆಸ್‌ ಮುಖಂಡರಿಗೆ ತಿಳಿದಿದ್ದರೂ ಅವರು ಸುಮ್ಮನಿದ್ದಾರೆ. ಪೊಲೀಸ್‌ ಆಯುಕ್ತರ ನಡವಳಿಕೆ ಗಳನ್ನು ಹೋರಾಟ ಸಮಿತಿ ಖಂಡಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ದೂರು ನೀಡಲಾಗುವುದು".

ಮುನೀರ್‌ ಕಾಟಿಪಳ್ಳ

ಸಂಚಾಲಕರು, ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಸುರತ್ಕಲ್

‌ಶೀಘ್ರದಲ್ಲೇ ಪೊಲೀಸ್‌ ಆಯುಕ್ತರ ಕಚೇರಿಗೆ ಮುತ್ತಿಗೆ

ಶಾಂತಿಯುತ ಧರಣಿಗೆ ಪ್ರಜಾಪ್ರಭುತ್ವದ ಆಶಯಗಳಂತೆ ಧರಣಿನಡೆಸಲು ಅವಕಾಶ ನಿರಾಕರಿಸಿರುವ ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಟೋಲ್‌ ಗೇಟ್‌ ಹೋರಾಟ ಸಮಿತಿ ಸಜ್ಜಾಗುತ್ತಿದೆ.

ಬುಧವಾರ ಕೂಳೂರು ಸೇತುವೆಯ ಬಳಿ ನಡೆದ ಧರಣಿಯ ಬಳಿಕ ಅದೇ ಸ್ಥಳದಲ್ಲಿ ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿಯ ಮುಖಂಡರು ಸಭೆ ನಡೆಯಿತು. ಈ ಸಭೆಯಲ್ಲಿ ಧರಣಿಗೆ ಅವಕಾಶ ನಿರಾಕರಿಸಿದ ಮಂಗಳೂರು ನಗರ ಪೊಲೀಸ್‌ ಆಯುಕ್ತರ ಕ್ರಮವನ್ನು ಮತ್ತು ಪ್ರಚಾರಕ್ಕಾಗಿ ಧರಣಿ ಪ್ರತಿಭಟನೆ ನಡೆಸುತ್ತದೆ ಎಂಬ ಪೊಲೀಸ್‌ ಉಪಾಯುಕ್ತ ಸಿದ್ದಾರ್ಥ್‌ ಗೋಯಲ್‌ ಅವರ ಹೇಳಿಕೆಯನ್ನು ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಸರ್ವ ಬಹುಮತದಿಂದ ಖಂಡಿಸಿತು. ಪೊಲೀಸ್‌ ಉನ್ನತ ಅಧಿಕಾರಿಯ ನಡವಳಿಕೆ ಮತ್ತು ಹೇಳಿಕೆಗಳನ್ನು ಖಂಡಿಸಿ ಶೀಘ್ರದಲ್ಲಿ ಪೊಲೀಸ್‌ ಆಯುಕ್ತರ ಕಚೇರಿಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆ ಹಾಕುವ ಕುರಿತು ಚರ್ಚೆಗಳಾದವು. ಶೀಘ್ರದಲ್ಲೇ ಈ ಬಗ್ಗೆ ಸರ್ವ ಸದಸ್ಯರ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿ ಹೋರಾಟ ಸಮಿತಿ ತಿಳಿಸಿದೆ.

ಕಮೀಷನರ್ ಅನುಪಮ್ ಅಗರ್ವಾಲ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ತೀರ್ಮಾನ:

ಜನರ ಪರವಾದ ಪ್ರತಿಭಟನೆ, ಜನಪರ ಸಂಘಟನೆಗಳನ್ನು ಹೀನಾಯವಾಗಿ ಕಾಣುವ, ಬೆದರಿಸುವ, ಪ್ರತಿಭಟಿಸುವ ಹಕ್ಕನ್ನು ನಿರ್ಬಂಧಿಸುವ ಮಂಗಳೂರು ಪೊಲೀಸ್ ಕಮೀಷನರ್ ಕುರಿತು ನಗರದ ಜನತೆ ಅಸಮಾಧಾನಿತರಾಗಿದ್ದಾರೆ. ಬಿಜೆಪಿ ಶಾಸಕರುಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಕಮೀಷನರ್ ನಡೆದುಕೊಳ್ಳುತ್ತಿದ್ದಾರೆ. ಇಸ್ಪೀಟು, ಮಟ್ಕಾ, ಬೆಟ್ಟಿಂಗ್, ಮಸಾಜ್ ಪಾರ್ಲರ್ ಮುಂತಾದ ಕೆಟ್ಟ ದಂಧೆಗಳು ಮಂಗಳೂರು ನಗರದದಲ್ಲಿ ವ್ಯಾಪಕವಾಗಿದೆ, ನಗರದ ನೆಮ್ಮದಿಯನ್ನು ಕದಡಿದೆ. ಇದೆಲ್ಲದರಿಂದ ರಾಜ್ಯ ಸರಕಾರಕ್ಕೂ ಕೆಟ್ಟ ಹೆಸರು ಬರುತ್ತಿದೆ. ಕಮಿಷನರ್ ಅಗರ್ ವಾಲ್ ವರುದ್ಧ ಕ್ರಮ ಕೈಗೊಳ್ಳಬೇಕು, ತಕ್ಷಣವೇ ಅವರನ್ನು ಮಂಗಳೂರಿನಿಂದ ವರ್ಗಾಯಿಸಬೇಕು, ಅವರ ಮೇಲಿನ ಗಂಭೀರ ಆರೋಪಗಳ ಕುರಿತು ಇಲಾಖಾ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಸ್ತುವಾರಿ ಸಚಿವರು, ಗೃಹ ಸಚಿವರು, ಮುಖ್ಯಮಂತ್ರಿಗಳಿಗೆ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರತಿಭಟನೆಯಲ್ಲಿ ಟೋಲ್‌ ಗೇಟ್‌ ಹೋರಾಟ ಸಮಿತಿಯ ಸಹ ಸಂಚಾಲಕರಾದ ರಾಘವೇಂದ್ರ ರಾವ್‌, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುರುಷೋತ್ತಮ್ ಚಿತ್ರಾಪುರ, ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಸಾಮರಸ್ಯ ಮಂಗಳೂರು ಇದರ ಅಧ್ಯಕ್ಷೆ ಮಂಜುಳಾ ನಾಯಕ್, ಡಿವೈಎಫ್ಐ ನಗರ ಸಮಿತಿ ಅಧ್ಯಕ್ಷ ಸಂತೋಷ್ ಬಜಾಲ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯಾದವ ಶೆಟ್ಟಿ, ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ದಿನೇಶ್ ಹೆಗಡೆ ಉಳೆಪಾಡಿ, ದಲಿತ ಸಂಘಗಳ ಸಮನ್ವಯ ಸಮಿತಿ ಮುಖಂಡರಾದ ಎಂ. ದೇವದಾಸ್, ದಲಿತ ಸಂಘರ್ಷ ಸಮಿತಿ ಮುಖಂಡ ರಘು ಎಕ್ಕಾರು, ಮಾಜಿ ಕರ್ಪೂರೇಟರ್ ಗಳಾದ ಪ್ರತಿಭಾ ಕುಳಾಯಿ, ಮುಹಮ್ಮದ್ ಕುಂಜತ್ತಬೈಲ್, ಅಯಾಝ್‌ ಕೃಷ್ಣಾಪುರ, ಡಿವೈಎಫ್ಐ ನ ಮಕ್ಸೂದ್ ಬಿ.ಕೆ., ಪ್ರಮೀಳಾ ಕೆ, ಮಹಿಳಾ ಕಾಂಗ್ರೆಸ್ ನ ಶಶಿಕಲಾ, ಹೋರಾಟ ಸಮಿತಿಯ ಪ್ರಮುಖರಾದ ಆಶಾ ಬೋಳೂರು, ಗಂಗಾಧರ ಬಂಜನ್ ಶಮೀರ್ ಕಾಟಿಪಳ್ಳ, ಸಲೀಂ ಶ್ಯಾಡೋ ಸೇರಿದಂತೆ ಹಲವು ಸಂಘಟನೆಗಳ ಪ್ರಮುಖರು ಹಾಜರಿದ್ದರು. ಶ್ರೀನಾಥ್ ಕುಲಾಲ್ ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X