Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮನಪಾ: ಜಲಸಿರಿ ಯೋಜನೆಗೆ ಸಿಗದ ಮುಕ್ತಿ

ಮನಪಾ: ಜಲಸಿರಿ ಯೋಜನೆಗೆ ಸಿಗದ ಮುಕ್ತಿ

► ಮನಪಾ ಸದಸ್ಯರಿಂದ ಅಧಿಕಾರಿಗಳ ತರಾಟೆ ► ಸಮಗ್ರ ಚರ್ಚೆಗೆ ವಲಯವಾರು ಸಭೆಗೆ ಮೇಯರ್ ನಿರ್ಣಯ

ವಾರ್ತಾಭಾರತಿವಾರ್ತಾಭಾರತಿ28 Nov 2024 5:39 PM IST
share
ಮನಪಾ: ಜಲಸಿರಿ ಯೋಜನೆಗೆ ಸಿಗದ ಮುಕ್ತಿ

ಮಂಗಳೂರು: ಮಹಾನಗರ ಪಾಲಿಕೆಯ ಜನರಿಗೆ 24*7 ಕುಡಿಯುವ ನೀರು ಪೂರೈಕೆಯ ನಿಟ್ಟಿನಲ್ಲಿ 2019ರಲ್ಲಿ ಆರಂಭಗೊಂಡಿರುವ ಜಲಸಿರಿ ಯೋಜನೆ ಇನ್ನೂ ಶೇ. 60ರಷ್ಟು ಪ್ರಗತಿಯೊಂದಿಗೆ ತೆವಳುತ್ತಿದೆ. ಈ ನಡುವೆ ಯೋಜನೆ ಪೂರ್ಣಗೊಳ್ಳಲು ಹೆಚ್ಚುವರಿ ಪೈಪ್‌ಲೈನ್‌ಗೆ ಮತ್ತೆ 70 ಕೋಟಿ ರೂ. ಬೇಡಿಕೆಯ ಪ್ರಸ್ತಾವ ಗುರುವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ಮಂಡಿಸಲಾಯಿತು. ಮಾತ್ರವಲ್ಲದೆ, ಅಸಮರ್ಪಕ ಕಾಮಗಾರಿಯಿಂದ ನಗರದ ವಿವಿಧ ವಾರ್ಡ್‌ಗಳಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ಹೊರಗೆಡಹಿದ ಪ್ರಸಂಗವೂ ಸಭೆಯಲ್ಲಿ ನಡೆಯಿತು.

ನೂತನ ಮೇಯರ್ ಮನೋಜ್ ಕುಮಾರ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕ ಅನಿಲ್ ಕುಮಾರ್ ಜಲಸಿರಿ ಯೋಜನೆಯ ಕುರಿತು ಆರಂಭದಲ್ಲಿ ಪ್ರಸ್ತಾವಿಸಿದರು.

792 ಕೋಟಿ ರೂ. ಅನುದಾನದಲ್ಲಿ ಸುಯೆಜ್ ಕಂಪನಿಯವರು ನಗರದಲ್ಲಿ ಜಲಸಿರಿ ಕಾಮಗಾರಿ ಕೈಗೆತ್ತಿಕೊಂಡು ಸುಮಾರು ಐದು ವರ್ಷಗಳು ಕಳೆದರೂ ಇನ್ನೂ ಮುಗಿದಿಲ್ಲ. ಪಾಲಿಕೆಯ 54 ವಲಯಗಳಿಗೆ 24*7 ನೀರು ಪೂರೈಕೆಯ ಯೋಜನೆಯಡಿ ಪ್ರಯೋಗಿಕವಾಗಿ ಒಂದು ವಾರ್ಡ್‌ನಲ್ಲಿಯೂ ಕಳೆದ ಐದು ವರ್ಷಗಳಲ್ಲಿ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಪಾಲಿಕೆ ಮತ್ತು ಯೋಜನೆಯ ಅಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಇಲ್ಲದೆ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅನಿಲ್ ಕುಮಾರ್ ಆಕ್ಷೇಪಿಸಿದರು.

ಮಾಜಿ ಮೇಯರ್ ಸುಧೀರ್ ಶೆಟ್ಟಿಯವರೂ ಈ ಬಗ್ಗೆ ಮಾತನಾಡಿ, ಅಡ್ಯಾರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಬ್ಲ್ಯುಟಿಪಿ (ನೀರು ಸಂಸ್ಕರಣಾ ಸ್ಥಾವರ) ನಿಂದ ಪಡೀಲ್‌ವರೆಗೆ ಹೆಚ್ಚುವರಿ ಪೈಪ್‌ಲೈನ್‌ಗೆ ಮತ್ತೆ 70 ಕೋಟಿ ರೂ.ಗಳ ಬೇಡಿಕೆ ಇರಿಸಲಾಗಿದೆ. ಯೋಜನೆಯ ಡಿಪಿಆರ್ ತಯಾರಿಸುವಾಗ ಈ ಬಗ್ಗೆ ಯಾಕೆ ತಿಳಿಸಲಾಗಿಲ್ಲ ಎಂದು ಪ್ರಶ್ನಿಸಿದರು.

ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಪ್ರವೀಣ್ ಚಂದ್ರ ಆಳ್ವ, ವಿನಯರಾಜ್, ಶಂಸಾದ್ ಅಬೂಬಕರ್, ಸಂಗೀತ ಆರ್. ನಾಯಕ್ ಸೇರಿದಂತೆ ಪಕ್ಷಾತೀತವಾಗಿ ಸದಸ್ಯರನೇಕರು ತಮ್ಮ ವಾರ್ಡ್‌ಗಳಲ್ಲಿ ಜಲಸಿರಿ ಕಾಮಗಾರಿಯ ಸಮಸ್ಯೆಗಳನ್ನು ಸಭೆಯಲ್ಲಿ ಹೇಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಆನಂದ್ ರವರು ಪ್ರತಿಕ್ರಿಯಿಸಿ, ಮಳೆಯ ಕಾರಣದಿಂದ ಹಲವೆಡೆ ಅಗೆಯಲಾಗಿರುವ ರಸ್ತೆಗಳನ್ನು ಮುಚ್ಚುವ ಕಾರ್ಯಕ್ಕೆ ಅಡಚಣೆಯಾಗಿತ್ತು. ಇದೀಗ ಆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಇದೇ ವೇಳೆ ಸುರತ್ಕಲ್ ವ್ಯಾಪ್ತಿಯ 12 ವಾರ್ಡ್‌ಗಳಲ್ಲಿ ಜನವರಿ ಎರಡನೆ ವಾರದಿಂದ 24*7 ನೀರು ಪೂರೈಕೆ ಆರಂಭಿಸಲು ಕ್ರಮ ಆಗಿದೆ ಎಂದರು.

ಪೈಲಟ್ ವಾರ್ಡ್‌ನಲ್ಲಿಯೇ ಇನ್ನೂ ನಾಲ್ಕು ವರ್ಷಗಳಲ್ಲಿ ನೀರು ಕೊಡಲು ಸಾಧ್ಯವಾಗದೆ ಇದೀಗ 12 ವಾರ್ಡ್‌ಗಳಿಗೆ ನೀರು ಕೊಡುವುದು ಹೇಗೆ ಎಂದು ಪ್ರತಿಪಕ್ಷದ ನಾಯಕ ಪ್ರಶ್ನಿಸಿದರು. ಇನ್ನೂ ಕಾಮಗಾರಿ ಪೂರ್ಣಗೊಳ್ಳದೆ ಸುರತ್ಕಲ್‌ನ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವುದು ಹಾಸ್ಯಾಸ್ಪದ ಎಂದು ಸ್ಥಳೀಯ ಪಾಲಿಕೆ ಸದಸ್ಯೆಯೊಬ್ಬರು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಐವನ್ ಡಿಸೋಜಾ ಮಾತನಾಡಿ, ಈಬಗ್ಗೆ ಕೆಡಿಪಿ ಸಭೆಯಲ್ಲಿಯೂ ಹಲವು ಬಾರಿ ಚರ್ಚೆ ನಡೆದಿದೆ. ಆದರೆ ಸಮಸ್ಯೆ ಬಗೆಹರಿದಿಲ್ಲ ಎಂದು ಬೇಸರಿಸಿದರು.

ಒಟ್ಟು 1288 ಕಿ.ಮೀ. ವ್ಯಾಪ್ತಿಯಲ್ಲಿ ನೀರು ಪೂರೈಕೆಯ ಪೈಪ್‌ಲೈನ್ ಅಳವಡಿಕೆಯಲ್ಲಿ 740 ಕಿ.ಮೀ. ಕಾಮಗಾರಿ ಆಗಿದ್ದು, 560 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ. 27000 ನೀರಿನ ಮೀಟರ್‌ಗಳನ್ನು ಅಳವಡಿಕೆ ಮಾಡಲಾಗಿದೆ. ಡಬ್ಲ್ಯುಟಿಪಿ ಕೆಲಸ ನಡೆಯುತ್ತಿದ್ದು, ಅಡ್ಯಾರ್‌ನಿಂದ ಪಡೀಲ್‌ಗೆ ಹೆಚ್ಚುವರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಯ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಲಸಿರಿ ಯೋಜನೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಕಳೆದ ನಾಲ್ಕು ವರ್ಷಗಳಿಂದ 24*7 ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದೆ. ಪ್ರತಿ ಸಭೆಯಲ್ಲೂ ಈ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ನಮ್ಮ ವಾರ್ಡ್‌ನಲ್ಲಿ ಮೂರು ದಿನಕ್ಕೊಮ್ಮೆ ನೀರು ಬರುವುದು. ಅಲ್ಲಿನ ಎಸ್‌ಟಿ ಕಾಲನಿಗೆ ಪಾಲಿಕೆ ನೀರೇ ತಲುಪತ್ತಿಲ್ಲ. ಹಲವು ಬಾರಿ ಈಬಗ್ಗೆ ಪ್ರಸ್ತಾವಿಸಿದರೂ ಪ್ರಯೋಜನವಾಗಿಲ್ಲ. ಬೋರ್‌ವೆಲ್‌ಗೆ ಅನುಮತಿ ಕೇಳಿದರೂ ಸಿಕ್ಕಿಲ್ಲ ಎಂದು ಸದಸ್ಯೆ ಶಂಸಾದ್ ಅಬೂಬಕರ್ ಹೇಳಿದರು.

ಜಲಸಿರಿ ಯೋಜನೆಯ ಅವ್ಯವಸ್ಥೆ ಕುರಿತಂತೆ ಸುದೀರ್ಘ ಚರ್ಚೆಯ ಬಳಿಕ ವಲಯವಾರು ಸಭೆ ನಡೆಸುವುದಾಗಿ ಮೇಯರ್ ಮನೋಜ್ ಕುಮಾರ್ ನಿರ್ಣಯ ಪ್ರಕಟಿಸಿದರು.

ಟ್ರಾಫಿಕ್ ಸಮಸ್ಯೆ ಇತ್ಯರ್ಥಕ್ಕೆ ಮತ್ತೆ ಸಭೆ

ಈಗಾಗಲೇ ಹಿಂದಿನ ಮೇಯರ್ ನೇತೃತ್ವದಲ್ಲಿ ನಗರದಲ್ಲಿ ಟ್ರಾಫಿಕ್‌ಸಮಸ್ಯೆ ಬಗೆಹರಿಸಲು ಸಭೆ ಕರೆಯಲಾಗಿದ್ದರೂ ನಗರ ದಲ್ಲಿ ಅವ್ಯವಸ್ಥೆ ಮುಂದುವರಿದಿದೆ. ಟ್ರಾಫಿಕ್ ಪೊಲೀಸರು ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಸಭೆಗೂ ಹಾಜರಾಗುತ್ತಿಲ್ಲ ಎಂದು ಸದಸ್ಯ ನವೀನ್ ಡಿಸೋಜಾ ಆರೋಪಿಸಿದರು.

ಪೊಲೀಸ್ ಅಧಿಕಾರಿಗಳು ಮೇಲಾಟ ಮಾಡಿ ನಗರಕ್ಕೆ ಬರಲು ಪ್ರಯತ್ನಿಸುತ್ತಾರೆ. ಆದರೆ ಸಭೆಗಳಿಗೆ ಹಾಜರಾಗುವುದಿಲ್ಲ. ನಗರದ ಬಹು ಮುಖ್ಯವಾದ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ಎನ್‌ಎಚ್‌ಎಐನವರು ಸ್ಪಂದಿಸುತ್ತಿಲ್ಲ ಎಂದು ಶಾಸಕ ಐವನ್ ಡಿಸೋಜಾ ಸಭೆಯಲ್ಲಿ ಆಕ್ಷೇಪಿಸಿದರು.

ಪರಿಷತ್ ಅನುಮತಿ ಇಲ್ಲದೆ ಡಿಪಿಆರ್ ?

ನಗರದ ಒಳಚರಂಡಿ ನೀರು ನದಿ ಮೂಲಗಳಿಗೆ ಸೇರುತ್ತಿರುವ ಕುರಿತಂತೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸೂಕ್ತ ಯೋಜನೆ ರೂಪಿಸಲು 40 ಕೋಟಿರೂ.ಗಳ ಅನುದಾನ ಒದಗಿಸಿದೆ. ಆದರೆ ಈ ಬಗ್ಗೆ ಪಾಲಿಕೆಯ ಅಧಿಕಾರಿಗಳು ಪಾಲಿಕೆಯ 60 ಸದಸ್ಯರು, ಸಂಸದರು, ಶಾಸಕರ ಗಮನಕ್ಕೆ ತಾರದೆ ಈ ಬಗ್ಗೆ ಡಿಪಿಆರ್ ಮಾಡಿ ಸರಕಾರಕ್ಕೆ ಕಳುಹಿಸಿ ದ್ದಾರೆ. ಇದು ಹೇಗೆ ಸಾಧ್ಯ ಎಂದು ಮಾಜಿ ಮೇಯರ್ ಸುಧೀರ್ ಶೆಟ್ಟಿ ಪ್ರಶ್ನಿಸಿದರು.

ಮನಪಾದಿಂದ ಆಗುವ ಡಿಪಿಆರ್ ಪರಿಷತ್ತಿನ ಅನುಮೋದನೆ ಪಡೆದು ಸರಕಾರಕ್ಕೆ ಸಲ್ಲಿಕೆಯಾಗಬೇಕು. ಅದು ಹಾಗೆ ಆಗದೆ ನೇರವಾಗಿ ಸರಕಾರಕ್ಕೆ ಹೇಗೆ ಹೋಗುತ್ತದೆ. ಅಧಿಕಾರಿಗಳು ಪಾಲಿಕೆಯ ಗಮನಕ್ಕೆ ಯಾಕೆ ತಂದಿಲ್ಲ ಎಂದು ಸದಸ್ಯ ವಿನಯರಾಜ್ ಅವರೂ ಪ್ರಶ್ನಿಸಿದರು.

ಉಪ ಮೇಯರ್ ಭಾನುಮತಿ, ವಿವಿಧ ಸ್ಥಾಯಿ ಸಮಿತಿ ಸದಸ್ಯರಾದ ವೀಣಾ ಮಂಗಳ, ಸರಿತಾ ಶಶಿಧರ್, ಕದ್ರಿ ಮನೋಹರ ಶೆಟ್ಟಿ, ಸುಮಿತ್ರಾ ಕರಿಯ ಉಪಸ್ಥಿತರಿದ್ದರು.

ಕ್ಲಾಕ್ ಟವರ್ ರಸ್ತೆ ದ್ವಿಮುಖ ಸಂಚಾರಕ್ಕೆ ಆಗ್ರಹ

ಕ್ಲಾಕ್‌ಟವರ್‌ನಿಂದ ಆರ್‌ಟಿಒವರೆಗಿನ ರಸ್ತೆಯನ್ನು ಮೊದಲಿದ್ದಂತೆಯೇ ದ್ವಿಮುಖ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪಾಲಿಕೆ ಯಲ್ಲಿ ಈ ಬಗ್ಗೆ ನಿರ್ಣಯವೂ ಮಾಡಲಾಗಿತ್ತು. ಜನರು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾರ್ವಜನಿಕವಾಗಿಯೂ ಈ ರಸ್ತೆ ದ್ವಿಮುಖ ಮಾಡಲು ಒತ್ತಾಯಿಸಿದ್ದಾರೆ. ಆದರೂ ಕ್ರಮ ಆಗಿಲ್ಲ ಎಂದು ಸದಸ್ಯ ಅಬ್ದುಲ್ ಲತೀಫ್ ಸಭೆಯ ಗಮನ ಸೆಳೆದರು.

ಹ್ಯಾಮಿಲ್ಟನ್ ಮತ್ತು ಎಬಿಶೆಟ್ಟಿ ವೃತ್ತವೂ ನಿರ್ಮಾಣ ಆಗಬೇಕು ಎಂದು ಸದಸ್ಯ ಶಶಿಧರ ಹೆಗ್ಡೆ ತಿಳಿಸಿದಾಗ ಈ ಬಗ್ಗೆ ಟ್ರಾಫಿಕ್ ಸಭೆಯಲ್ಲಿ ಮಾತನಾಡುವುದಾಗಿ ಮೇಯರ್ ಮನೋಜ್ ಕುಮಾರ್ ತಿಳಿಸಿದರು.

ಆರೋಪ ಪ್ರತ್ಯಾರೋಪಕ್ಕೆ ಕಾರಣವಾದ ವಸತಿ ಯೋಜನೆ

ಪಾಲಿಕೆ ವ್ಯಾಪ್ತಿಯ 2016ರಲ್ಲಿ 930 ಬಡ ಫಲಾನುಭವಿಗಳಿಗೆ ಜಿ+3 ಮಾದರಿಯಲ್ಲಿ ವಸತಿ ಯೋಜನೆಗಾಗಿ ಪದವು ಗ್ರಾಮದಲ್ಲಿ 10 ಎಕರೆ ಜಮೀನು ಮೀಸಲಿಟ್ಟು ಯೋಜನೆಯ ಡಿಪಿಆರ್ ಆಗಿತ್ತು. ಫಲಾನುಭವಿಗಳ ಆಯ್ಕೆಯೂ ನಡೆದಿತ್ತು. ಸರಕಾರದ ಸಬ್ಸಿಡಿ ಹಣ ಬ್ಯಾಂಕ್ ಸಾಲದಡಿ ಫ್ಲ್ಯಾಟ್ ನಿರ್ಮಾಣ ಮಾಡಲು ಒಟ್ಟು 63 ಕೋಟಿ ರೂ. ಅಂದಾಜು ವೆಚ್ಚ ಪಟ್ಟಿ ತಯಾರು ಮಾಡಿ ಟೆಂಡರ್ ಕೂಡಾ ಆಗಿತ್ತು. ಆದರೆ ಅಲ್ಲಿ ವಸತಿ ನಿರ್ಮಾಣ ಆಗದು ಎಂದು ಅಲ್ಲಿ ಪುಕಾರು ಎಬ್ಬಿಸಿದ ಕಾರಣ ಯೋಜನೆ ನೆನೆಗುದಿಗೆ ಬಿತ್ತು. ಆದರೆ ಅಂದು ಅಲ್ಲಿ ವಸತಿ ನಿರ್ಮಾಣ ಸಾಧ್ಯ ಇಲ್ಲ ಎಂದು ಅಡ್ಡಗಾಲು ಹಾಕಿದವರೇ ಇಂದು ಸರಕಾರಕ್ಕೆ ಆಗಿನ 63 ಕೋಟಿ ರೂ.ಗಳ ಯೋಜನೆಯ ಬದಲಿಗೆ 145 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದು ಹೇಗೆ ಸಾಧ್ಯವಾಗಿದೆ ಎಂದು ಸ್ಥಳೀಯ ಶಾಸಕರ ಹೆಸರು ಪ್ರಸ್ತಾವಿಸಿ ಸದಸ್ಯ ವಿನಯರಾಜ್ ಸಭೆಯಲ್ಲಿ ಆರೋಪಿಸಿದರು.

ಇದರಿಂದ ಅಸಮಾಧಾನಗೊಂಡ ಮಾಜಿ ಮೇಯರ್ ಸುಧೀರ್ ಶೆಟ್ಟಿ ಚುನಾವಣೆಯ ಸಂದರ್ಭದಲ್ಲಿ ಡೀಮ್ಡ್ ಫಾರೆಸ್ಟ್ ಜಾಗವನ್ನು ಬಡವರಿಗೆ ನೀಡುವ ವಾಗ್ದಾನ ಮಾಡಿ ಮೋಸ ಮಾಡಿದವರು ನಿಮ್ಮ ಶಾಸಕರು ಎಂದು ಆರೋಪಿಸಿದರು. ಆಡಳಿತ ಪಕ್ಷದ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಶಕೀಲಾ ಕಾವ ಸೇರಿದಂತೆ ಇತರರೂ ಪ್ರತಿಪಕ್ಷದ ವಿರುದ್ಧ ಮುಗಿಬಿದ್ದರು.

ಬಿಜೆಪಿ ಆಡಳಿತದ ಪಾಲಿಕೆ ಅವಧಿಯಲ್ಲಿ ಬಡವರಿಗೆ ವಸತಿ ಶೂನ್ಯ ಎಂದು ಪ್ರತಿಪಕ್ಷದ ನಾಯಕ, ಸದಸ್ಯರು ಆರೋಪಿ ಸಿದರೆ, ಬಡವರ ಹೆಸರಿನಲ್ಲಿ ಮೋಸ ಮಾಡಿರುವುದು ನೀವು ನಿಮ್ಮ ಅಭಿವೃದ್ಧಿ ಶೂನ್ಯ ಎಂದು ಆಡಳಿತ ಪಕ್ಷದ ಸದಸ್ಯರು ಪರಸ್ಪರ ಆರೋಪ ಪ್ರತ್ಯಾರೋಪ ನಡೆಸಿದಾಗ ಕೆಲ ಹೊತ್ತು ಪಾಲಿಕೆ ಸಭಾಂಗಣ ಗೊಂದಲಕ್ಕೀಡಾಯಿತು.





share
ವಾರ್ತಾಭಾರತಿ
ವಾರ್ತಾಭಾರತಿ
Next Story
X