ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ಸಮಾಲೋಚನಾ ಸಭೆ
ಬಂಟ್ವಾಳ : ಮುಸ್ಲಿಂ ಸಮಾಜ ಬಂಟ್ವಾಳ ನೇತೃತ್ವದಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರ "ಸಮಾಲೋಚನಾ ಸಭೆ" ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಇಂತಿಯಾಝ್ ಮಾತನಾಡಿ, ಭಾರತದಲ್ಲಿ ಮುಸ್ಲಿಮರು ಎದುರಿಸು ತ್ತಿರುವ ಕಾನೂನಾತ್ಮಕ ಸವಾಲುಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ರಾಷ್ಟ್ರೀಯ ವಕ್ಫ್ ಹೋರಾಟ ಸಮಿತಿ ಸದಸ್ಯ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮೂಲಕ ಮುಸ್ಲಿಮರ ಹಕ್ಕುಗಳನ್ನು ಕಸಿಯಲು ಯಾವೆಲ್ಲಾ ಷಡ್ಯಂತ್ರಗಳನ್ನು ರೂಪಿಸುತ್ತಿವೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಮುಸ್ಲಿಂ ಸಮಾಜ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿ ಹನೀಫ್ ಖಾನ್ ಕೊಡಾಜೆ ವಿಷಯ ಮಂಡನೆಯ ಬಳಿಕ ನಡೆದ ಚರ್ಚೆಯಲ್ಲಿ ವಿವಿಧ ಸಂಘಟನೆಯ ಮುಖಂಡರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿದರು. ಮುಸ್ಲಿಂ ಸಮಾಜ ಅಧ್ಯಕ ಅಬೂಬಕ್ಕರ್ ಕೆ.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು.
ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮ್ಯೂಸಿಯಂ ಸ್ಥಾಪಕ ಮೊಹಮ್ಮದ್ ಯಾಸಿರ್ ಅವರನ್ನು ಸನ್ಮಾನಿಸಲಾಯಿತು.
ಮುಸ್ಲಿಂ ಸಮಾಜ ಗೌರವಾಧ್ಯಕ್ಷ ಬಿ.ಎಚ್.ಖಾದರ್ ಬಂಟ್ವಾಳ, ಪಿ.ಎ.,ರಹೀಂ ಉಪಸ್ಥಿತರಿದ್ಧರು. ಮುಸ್ಲಿಂ ಸಮಾಜ ಉಪಾಧ್ಯಕ್ಷ ಅಬ್ಬಾಸ್ ಅಲಿ ಪ್ರಸ್ತಾವನೆಗೈದರು.
ಕಾರ್ಯಕಾರೀ ಸಮಿತಿ ಸದಸ್ಯರಾದ ಮುಹಮ್ಮದ್ ಬಂಟ್ವಾಳ ಸ್ವಾಗತಿಸಿ, ಇಕ್ಬಾಲ್ ಐ.ಎಮ್.ಆರ್ ವಂದಿಸಿದರು. ಝೈನುಲ್ ಅಕ್ಬರ್ ಕಡೇಶ್ವಾಲ್ಯ ಮತ್ತು ಮುಸ್ತಾಕ್ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು.