ಅಂಗನವಾಡಿ ಕ್ರಷ್ ಕೇಂದ್ರಗಳಿಗೆ ಅರ್ಜಿ ಆಹ್ವಾನ

ಮಂಗಳೂರು : ಮಂಗಳೂರು ನಗರ ಗ್ರಾಮಾಂತರ ವ್ಯಾಪ್ತಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿರುವ ಅಂಗನವಾಡಿ/ಕ್ರಷ್‌ನ 6 ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಜ.1ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.
ಉಳ್ಳಾಲ ತಾಲೂಕಿನ ಬಬ್ಬುಕಟ್ಟೆ, ಮೂಡುಬಿದಿರೆ ತಾಲೂಕಿನ ನಾಗರಕಟ್ಟೆ, ಬಂಟ್ವಾಳ ತಾಲೂಕಿನ ಕೈಕುಂಜೆ, ಪುತ್ತೂರಿನ ನೆಲ್ಲಿಕಟ್ಟೆ, ಬೆಳ್ತಂಗಡಿಯ ಉದಯನಗರ, ವಿಟ್ಲ ವ್ಯಾಪ್ತಿಯ ವಿಟ್ಲ ಮಹಿಳಾ ಮಂಡಲ ಅಂಗನವಾಡಿ/ಕ್ರಷ್‌ಗೆ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಾರ್ಯಕರ್ತೆಯರ ಮಾಸಿಕ ಗೌರವಧನ 5,500 ರೂ.ಹಾಗೂ ಸಹಾಯಕಿಯರ ಮಾಸಿಕ ಗೌರವಧನ 3,000 ರೂ. ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ಗ್ರಾಮಾಂತರ:9620636888, ಬಂಟ್ವಾಳ: 7760729919, ಪುತ್ತೂರು:08251-298788, ವಿಟ್ಲ: 08255-238080, ಬೆಳ್ತಂಗಡಿ:08256-295134 ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





