ಮಂಗಳೂರು| ಎಂಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಮನವಿ
ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕ್ರೈಸ್ತ ಸಮುದಾಯದ 155 ಮಂದಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಹಿಯನ್ನು ಹಾಕಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್‌ಗೆ ಮನವಿ ಮಾಡಿದ್ದಾರೆ.
ಮನೋಹರ್ ಪಿರೇರಾ ಸಾವಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿರುವ ಮನವಿಯ ಪತ್ರವನ್ನು ಮುಖ್ಯಮಂತ್ರಿ, ಗೃಹ ಸಚಿವರು, ಸಹಕಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸ್ಪೀಕರ್ ಯು.ಟಿ. ಖಾದರ್‌ಗೂ ರವಾನಿಸಿದ್ದಾರೆ.
ಪ್ರಕರಣ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದ್ದರೂ ಘಟನೆಯ ಪಾರದರ್ಶಕ ತನಿಖೆ ನಡೆಸುವ ನಿಟ್ಟಿನಲ್ಲಿ ತನಿಖಾಧಿಕಾರಿಯಾಗಿ ಕಂಕನಾಡಿ ನಗರ ಠಾಣೆಯ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್‌ರನ್ನು ಪೊಲೀಸ್ ಕಮಿಷನರ್ ನೇಮಿಸಿದ್ದಾರೆ.
ಇತ್ತ ದ.ಕ. ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಡಿ.27ರಂದು ನಿಗದಿಯಾಗಿದ್ದ ಜಾಮೀನು ಅರ್ಜಿಯು ಸರಕಾರಿ ರಜೆ ಘೋಷಣೆಯಾದ ಕಾರಣ ಮುಂದೂಡಿಕೆಯಾಗಿದೆ. ಡಿ.30ರಂದು ಅರ್ಜಿ ವಿಚಾರಣೆಗೆ ಬರಲಿದೆ.
Next Story





