ಭಾರತ ಸೇವಾದಳದ ಸಪ್ತಾಹ ಸಮಾರೋಪ ಕಾರ್ಯಕ್ರಮ

ಮಂಗಳೂರು, ಜ.3: ಭಾರತ ಸೇವಾದಳದ ದ.ಕ.ಜಿಲ್ಲಾ ಸಮಿತಿ ವತಿಯಿಂದ ನಗರದ ಬಲ್ಮಠದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವಾದಳ ಸಪ್ತಾಹ ಸಮಾರೋಪ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಶಾಲಾ ವಿದ್ಯಾರ್ಥಿಗಳಿಗೆ ರಾಷ್ಟ್ರ ಧ್ವಜ ಬಗ್ಗೆ, ಸೇವಾದಳ ಸ್ಥಾಪಕ ಡಾ.ಎನ್.ಎಸ್. ಹರ್ಡಿಕರ್‌ರ ಚಿತ್ರ ಬಿಡಿಸುವ ಸ್ಪರ್ಧೆ, ದೇಶ ಪ್ರೇಮದ ಬಗ್ಗೆ ಪ್ರಬಂಧ, ರಾಷ್ಟ್ರ ನಾಯಕರ ಬಗ್ಗೆ ಭಾಷಣ, ದೇಶಭಕ್ತಿ ಗೀತೆ, ಸೇವಾದಳ ಲೋಗೋ ಚಿತ್ರ ಬಿಡಿಸುವುದು ಇತ್ಯಾದಿ ವಿಷಯಗಳಲ್ಲಿ ಸ್ಪರ್ಧಾಕೂಟ ನಡೆದಿತ್ತು. ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ರಾಜ್ಯದ ಕೇಂದ್ರ ಸೇವಾದಳದ ಸದಸ್ಯ ಬಶೀರ್ ಬೈಕಂಪಾಡಿ ಮಾತನಾ ಡಿದರು. ಸೇವಾದಳ ಜಿಲ್ಲಾಧ್ಯಕ್ಷ ಎಸ್ ಬಿ. ಜಯರಾಮ್ ರೈ, ಮಂಗಳೂರು ತಾಲೂಕು ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ಬಲ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವನಿತಾ ದೇವಾಡಿಗ, ಶಿಕ್ಷಕಿ ಜೂಲಿಯಾನ, ಹರಿಣಾಕ್ಷಿ, ಮಾಲತಿ, ಉಮಾಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ಮುಖ್ಯ ಸಂಘಟಕ ಟಿ.ಎಸ್. ಮಂಜೇಗೌಡ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಟಿ. ಕೆ. ಸುಧೀರ್ ವಂದಿಸಿದರು.







