ಬ್ಯಾರಿ ಮಹಿಳಾ ಪರಿಷತ್ ಅಧ್ಯಕ್ಷೆಯಾಗಿ ಶಮೀಮಾ ಕುತ್ತಾರ್ ಆಯ್ಕೆ

ಶಮೀಮಾ ಕುತ್ತಾರ್
ಮಂಗಳೂರು: ಅಖಿಲ ಭಾರತ ಬ್ಯಾರಿ ಪರಿಷತ್ ಇದರ ಆಶ್ರಯದಲ್ಲಿ ಮಂಗಳೂರಿನ ಸ್ಟೇಟ್ ಬ್ಯಾಂಕ್ ಸಮೀಪದ ನ್ಯಾಶನಲ್ ಟ್ಯುಟೋರಿಯಲ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಪರಿಷತ್ತಿನ ಅಧ್ಯಕ್ಷ ಯು.ಎಚ್.ಖಾಲಿದ್ ಉಜಿರೆ ಅವರ ಅಧ್ಯಕ್ಷತೆಯಲ್ಲಿ ಜರಗಿದ ಬ್ಯಾರಿ ಮಹಿಳಾ ಪರಿಷತ್ ರಚನೆಯ ಮಹಾಸಭೆಯಲ್ಲಿ ಶಮೀಮಾ ಕುತ್ತಾರ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದರು.
ಇಂಗ್ಲಿಷ್ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಕನ್ನಡ, ಇಂಗ್ಲಿಷ್ ಹಾಗೂ ಬ್ಯಾರಿ ಭಾಷೆಗಳಲ್ಲಿ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಮಕ್ಕಳ ಮನೋವಿಜ್ಞಾನ ಮುಂತಾದ ವಿಷಯಗಳಲ್ಲಿ ಕೌನ್ಸೆಲಿಂಗ್ ತಜ್ಞೆಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
2025-26 ನೇ ಸಾಲಿನ ನೂತನ ಬ್ಯಾರಿ ಮಹಿಳಾ ಸಮಿತಿಗೆ ಆಯ್ಕೆಯಾದ ಇತರ ಪದಾಧಿಕಾರಿಗಳ ವಿವರ ಹೀಗಿದೆ :
ಗೌರವಾಧ್ಯಕ್ಷೆ : ಹಫ್ಸಾ ಬಾನು ಬೆಂಗಳೂರು, ಉಪಾಧ್ಯಕ್ಷರು: ಅಸ್ಮತ್ ವಗ್ಗ ಮತ್ತು ಆಯಿಷಾ ಕಲ್ಲಾಪು, ಪ್ರಧಾನ ಕಾರ್ಯದರ್ಶಿ : ರಮೀಝ ಯಂ.ಬಿ ಕುಕ್ಕಾಜೆ , ಜೊತೆ ಕಾರ್ಯದರ್ಶಿಗಳು : ಸಾರಾ ಮಸ್ಕುರುನ್ನೀಸಾ
ಆಶಿಕಾ ಇಬ್ರಾಹೀಂ , ಕೋಶಾಧಿಕಾರಿ: ಸೌದಾ ಉಲಾಯಿಬೆಟ್ಟು.
ಕಾರ್ಯಕಾರಿ ಸಮಿತಿ ಸದಸ್ಯರು: ಆಯಿಷಾ ಪಾಂಡೇಶ್ವರ್ , ಜಮೀಲ ಕಂಕನಾಡಿ , ರಶೀದ ಮದಕ, ಆಯಿಷಾ ಲಾಲ್ಬಾಗ್, ಫರ್ಹಾನ ಉಳ್ಳಾಲ, ಫಾತಿಮಾ ಲಾಲ್ಬಾಗ್, ಸಿಹಾನ ಬಿ. ಎಂ, ರೈಹಾನ ಸಚ್ಚೇರಿಪೇಟೆ, ರಮ್ಲತ್ ಇರಾ, ಝೈನಬಿ, ಮಿಶ್ರಿಯಾ ಅಜ್ಜಿನಡ್ಕ, ರಶೀದ ಮೂಡುಬಿದಿರೆ, ಪ್ರಧಾನ ಸಲಹೆಗಾರರು: ಯು. ಎಚ್. ಖಾಲಿದ್ ಉಜಿರೆ, ಇಬ್ರಾಹೀಂ ನಡುಪದವು, ನಿಸಾರ್.ಎಫ್ ಮುಹಮ್ಮದ್.
ಸಭೆಯಲ್ಲಿ ಕೇಂದ್ರೀಯ ಪರಿಷತ್ತಿನ ಹಿರಿಯ ಸದಸ್ಯರಾದ ಯೂಸುಫ್ ವಕ್ತಾರ್, ಮಹಮ್ಮದ್ ಕುಂಜತ್ಬೈಲ್, ಇಬ್ರಾಹಿಮ್ ನಡುಪದವು ಅಬ್ದುಲ್ ಲತೀಫ್ ಕಂದಕ ,ಡಾ. ಸಿದ್ದೀಕ್ ಅಡ್ಡೂರು, ಶೌಕತ್ ಇಕ್ಬಾಲ್, ಅಬ್ದುಲ್ ರಹಿಮಾನ್, ಎಂ.ಜಿ.ಶಾಹುಲ್ ಹಮೀದ್, ಹಸನಬ್ಬ ಮೂಡಬಿದ್ರೆ, ಹುಸೈನ್ ಕೂಳೂರು , ಅಬೂಬಕ್ಕರ್ ಮುಡಿಪು ಮುಂತಾದವರು ಉಪಸ್ಥಿತರಿದ್ದರು.







