ಕಲ್ಕಟ: ಸ್ವಲಾತ್ ವಾರ್ಷಿಕೋತ್ಸವ ಪ್ರಯುಕ್ತ ಬುರ್ದಾ ಮಜ್ಲಿಸ್

ದೇರಳಕಟ್ಟೆ: ಟಿಐವೈಎ ಹಾಗೂ ಎಸ್ಸೆಸ್ಸೆಫ್ ಕಲ್ಕಟ್ಟ ಇದರ ಆಶ್ರಯದಲ್ಲಿ ಶನಿವಾರ ನಡೆಯುವ 25ನೇ ಸ್ವಲಾತ್ ವಾರ್ಷಿಕೋತ್ಸವದ ಪ್ರಯುಕ್ತ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಗುರುವಾರ ಕಲ್ಕಟ್ಟ ಮಸೀದಿ ವಠಾರದಲ್ಲಿ ನಡೆಯಿತು.
ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಸಯ್ಯಿದ್ ತ್ವಾಹಾ ತಂಙಳ್ ನೇತೃತ್ವದಲ್ಲಿ ನಡೆದ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಶಾಹಿನ್ ಬಾಬು, ಶಮೀಮ್ ಕಲ್ಕಟ್ಟ ರಿಫಾಯಿಯ್ಯ ಮದ್ರಸ ಸದ್ರ್ ಶರೀಫ್ ಸಅದಿ, ಮುಅಲ್ಲಿಂಗಳಾದ ಇಸಾಕ್ ಸಅದಿ, ರಝಾಕ್ ಸಅದಿ, ಹಸನ್ ಸಅದಿ ಅಬ್ದುಲ್ ರಹಿಮಾನ್ ರಝ್ವಿ ಉಪಸ್ಥಿತರಿದ್ದರು. ಟಿ.ಎಚ್.ನಿಸಾರ್ ಸಖಾಫಿ ತಟ್ಲ ಸ್ವಾಗತಿಸಿದರು.
Next Story





