ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ: ಅಡ್ಡಿಯಾದ ಮಳೆ, ಮೋಡ ಕವಿದ ವಾತಾವರಣ

ಮಂಗಳೂರು: ನಗರದ ತಣ್ಣೀರುಬಾವಿ ಬೀಚ್ನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಎರಡನೇ ದಿನ ಮಳೆ ಮತ್ತು ಮೋಡ ಕವಿದ ವಾತಾವರಣ ಗಾಳಿಪಟ ಹಾರಾಟಕ್ಕೆ ತುಸು ಅಡ್ಡಿಯಾಯಿತು.
ಆದರೆ ಮೊದಲನೆ ದಿನ ಮತ್ತು ಎರಡನೆ ದಿನ ಸಂಜೆ ಮೂರು ಗಂಟೆಯವರೆಗೆ ಗಾಳಿ ಪಟ ಹಾರಾಟಕ್ಕೆ ಪೂರಕವಾದ ಗಾಳಿಯ ವೇಗ ಇತ್ತು ಬಳಿಕ ಇದ್ದಕ್ಕಿದ್ದಂತೆ ಮೋಡ ಕವಿದು ಸುರಿದ ಮಳೆ ಉತ್ಸವಕ್ಕೆ ಅಡ್ಡಿಯಾಯಿತು. ಆದರೂ ಮುಸ್ಸಂಜೆಯ ವೇಳೆಗೆ ದೇಶ ವಿದೇಶದಿಂದ ಬಂದ ಗಾಳಿಪಟ ಹಾರಾಟದ ತಜ್ಞರು ತಮ್ಮ ಗಾಳಿ ಪಟಗಳನ್ನು ಮೇಲಕ್ಕೆ ಹಾರಿಸಲು ಕಿಕ್ಕಿರಿದು ನೆರೆದ ಪ್ರೇಕ್ಷಕರ ನಡುವೆ ಪ್ರಯತ್ನ ಮಾಡಿದರು.
ಫ್ರಾನ್ಸ್ ದೇಶದ ಗಾಳಿಪಟ ಹಾರಾಟ ತಂಡದ ಪ್ರತಿನಿಧಿ ಡೇನಿಯಲ್ ರವರು ಹೇಳುವಂತೆ, "ತಾನು ಭಾರತ ಸೇರಿದಂತೆ ವಿವಿಧ ದೇಶಗಳ ಗಾಳಿ ಪಟ ಉತ್ಸವದಲ್ಲಿ ಭಾಗವಹಿಸಿದ್ದೇನೆ ಮಂಗಳೂರು ಪರಿಸರ ಇಲ್ಲಿನ ಆತಿಥ್ಯ ನನಗೆ ತುಂಬಾ ಇಷ್ಟವಾಯಿತು.ಪ್ರಥಮ ದಿನ ಗಾಳಿಯ ವೇಗ ಚೆನ್ನಾಗಿತ್ತು ಆದರೆ ಇಂದು ಸಂಜೆಯ ವೇಳೆ ಮೋಡ ಕವಿದ ವಾತಾವರಣ ಬಹುತೇಕ ಗಾಳಿಯ ವೇಗಕ್ಕೆ ಅಡ್ಡಿಯಾಯಿತು ಗಾಳಿಪಟ ಹಾರಲು ಬೇಕಾದ 10 ರಿಂದ 14 ಕಿ.ಮೀ ವೇಗವು ಇರಲಿಲ್ಲ. ಬದಲಾದ ಈ ವಾತವರಣ ಸ್ವಲ್ಪ ಅಡಚಣೆಯಾಯಿತು ಆದರೂ ಜನ ತುಂಬಾ ನಿರೀಕ್ಷೆ ಇಟ್ಟುಕೊಂಡು ವೀಕ್ಷಿಸಿದ್ದಾರೆ" ಎಂದು ವಿವರಿಸಿದರು.
ಈ ಉತ್ಸವದಲ್ಲಿ ಕುದುರೆ, ಹುಲಿಗಳು ಸೇರಿದಂತೆ ನೂರಾರು ಬಗೆಬಗೆಯ ಗಾಳಿಪಟಗಳು ಗಮನ ಸೆಳೆದವು.
ಟೀಮ್ ಮಂಗಳೂರು, ಹವ್ಯಾಸಿ ಗಾಳಿಪಟ ತಂಡವು ಒಎನ್ ಜಿಸಿ ಎಂಆರ್ ಪಿಎಲ್ ಪ್ರಾಯೋಜಕತ್ವದಲ್ಲಿ 'ಕರಾವಳಿ ಉತ್ಸವ'ದ ಭಾಗವಾಗಿ ಜಿಲ್ಲಾಡಳಿತದ ಸಹಕಾರದೊಂದಿಗೆ ಮಂಗಳೂರಿನ ತಣ್ಣೀರು ಬಾವಿ ಕಡಲ ಕಿನಾರೆಯಲ್ಲಿ ಟೀಮ್ ಮಂಗಳೂರು ತಂಡದ 8ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಲ್ಲಿ ದೇಶದ ರಾಜಸ್ತಾನ, ಮಹಾ ರಾಷ್ಟ್ರ,ಒಡಿಶಾ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದ ಗಾಳಿಪಟ ತಂಡಗಳ ಪ್ರತಿನಿಧಿಗಳಲ್ಲದೆ ವಿದೇಶದಿಂದ ಫ್ರಾನ್ಸ್ ,ಗ್ರೀಸ್ , ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಇಟೆಲಿ, ಸ್ವೀಡನ್, ಇಂಡೋನೇಶಿಯಾ, ಫ್ರಾನ್ಸ್, ಇಟೆಲಿ, ಇಂಗ್ಲೆಂಡ್, ಕೆನಡಾ, ಕೊರಿಯಾ, ಹಾಂಕಾಂಗ್, ದುಬೈ, ಖತರ್, ಪೊರ್ಚುಗಲ್,ಸ್ಲೊವೆನಿಯಾ ದಿಂದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಟೀಮ್ ಮಂಗಳೂರು ತಂಡವು ಕಥಕ್ಕಳಿ, ಯಕ್ಷಗಾನ, ಪುಷ್ಪಕ ವಿಮಾನ, ಗಜರಾಜ, ಗರುಡ ಮುಂತಾದ ಗಾಳಿಪಟಗಳ ಜೊತೆ ನಮೆಲ್ಕರಿಗೂ ಒಂದೇ ಆಕಾಶ, ಒಂದೇ ಭೂಮಿ, ನಾವೆಲ್ಕರೂ ಒಂದೇ ಕುಟುಂಬ' ಎಂಬ ಧ್ಯೇಯ ದೊಂದಿಗೆ ಈ ಗಾಳಿಪಟ ಉತ್ಸವ ಜಾಗತಿಕವಾಗಿ ಜನರನ್ನು ಒಗ್ಗೂಡಿಸುವ ಗುರಿ ಹೊಂದಿದೆ.ತಣ್ಣೀರು ಬಾವಿ ಕಡಲಂಚಿನ ಬಾನಂಗಳದಲ್ಲಿ ಮೊದಲದಿನ ಗಾಳಿಪಟಗಳ ನರ್ತನ,ಗಾಳಿ ತುಂಬಿದ ಬಲೂನ್ ಬೃಹತ್ ವರ್ತುಲಾ ಕಾರದ, ಪತಂಗ, ಗರುಡ ಹಕ್ಕಿ ಸೇರಿದಂತೆ ವಿವಿಧ ವಿನ್ಯಾಸದ ಗಾಳಿಪಟಗಳು ವೀಕ್ಷಕರ ಗಮನ ಸೆಳೆದರೂ ಸಂಜೆ ಹೊತ್ತಿಗೆ ಬದಲಾದ ವಾತಾವರಣದಿಂದ ಅಂತಿಮ ಕ್ಷಣದಲ್ಲಿ ಪ್ರೇಕ್ಷಕರಿಗೆ ನಿರಾಸೆ ಯನ್ನುಂಟು ಮಾಡಿತು.
ಈ ಹಿಂದೆ ಎಂಟು ದೇಶಗಳಿಂದ ವಿದೇಶಿಯರ ತಂಡಗಳು ಭಾಗವಹಿಸಿದ್ದರೆ.ಈ ಬಾರಿ 11 ದೇಶಗಳ ವಿದೇಶಿಯರ ತಂಡ ಉತ್ಸಾಹದಿಂದ ಭಾಗವಹಿಸಿತ್ತು.
ಟೀಮ್ ಮಂಗಳೂರು ತಂಡದ ಪ್ರತಿನಿಧಿಯೊಬ್ಬರು ಹೇಳುವಂತೆ ಎಂಟನೆಯ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 11 ದೇಶಗಳಿಂದ ಸುಮಾರು 22 ವಿದೇಶಿ ಪ್ರತಿನಿಧಿಗಳುದೇಶದ ವಿವಿಧ ಭಾಗದಿಂದ 30 ಮಂದಿ ಭಾಗವಹಿಸುತ್ತಿದ್ದಾರೆ.
ಇಂಡೋನೇಷ್ಯಾ ಮತ್ತು ಗ್ರೀಸ್ ದೇಶದ ಗಾಳಿಪಟುಗಳ ಗಾಳಿಪಟ ಈ ಬಾರಿಯ ವಿಶೇಷತೆಯಾಗಿದೆ ಮೊದಲ ದಿನ ಉತ್ತಮ ಆರಂಭ ವಾತಾವರಣ ಇತ್ತು ಬಳಿಕ ಮಳೆಯ ವಾತಾವರಣ ಸ್ವಲ್ಪ ತೊಡಕಾಯಿತು ಎಂದರು. ಈ ನಡುವೆ ಹೈದರಾಬಾದ್ ನ ಗಾಳಿಪಟ ಪಟು ಕಿರಿದಾದ ಗಾಳಿಪಟ ಗರುಡವನ್ನು ಸ್ವಲ್ಪ ಎತ್ತರಕ್ಕೆ ಹಾರಿಸಿದರು. ಈ ಸಂದರ್ಭ ಕಡಲ ತೀರದಲ್ಲಿ ನೆರೆದ ಪ್ರೇಕ್ಷಕರು ತಾವು ಚಿಕ್ಕ ಗಾಳಿಪಟಗಳನ್ನು ಬಾನಂಗಳದಲ್ಲಿ ಹಾರಿಸಿ ಗಮನ ಸೆಳೆದರು.