ಕಾಶಿಮಠ ಈಶ್ವರ ಭಟ್ ರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ರಾಷ್ಟ್ರಮಟ್ಟದ ಈಜು ಚಾಂಪಿಯನ್, ವಿಟ್ಲ ಸರಕಾರಿ ಪಶುವೈದ್ಯ ಹಿರಿಯ ಪರೀಕ್ಷಕರಾದ ಕಾಶಿಮಠ ಈಶ್ವರ ಭಟ್ ಅವರು ಅನಾರೋಗ್ಯದಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸ್ಪೀಕರ್ ಯು.ಟಿ.ಖಾದರ್ ಅವರು ರವಿವಾರ ಭೇಟಿ ನೀಡಿ, ಯೋಗಕ್ಷೇಮ ವಿಚಾರಿಸಿದರು.
ವಿಟ್ಲದ ಕಾಶಿಮಠ ಈಶ್ವರ ಭಟ್ ಅವರು ಆಪತ್ಬಾಂಧವರಾಗಿ ಕೆಲಸ ಮಾಡುತ್ತಿದ್ದು, ನೂರಾರು ಈಜುಪಟುಗಳಿಗೆ ತರಬೇತಿ ನೀಡಿದ್ದು, ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಚಿನ್ನದ ಪದಕವನ್ನು ಮೂರು ಬಾರಿ ಪಡೆದ ಹೆಗ್ಗಳಿಕೆ ಅವರದ್ದು. ಈಶ್ವರ ಭಟ್ ಶೀಘ್ರ ಗುಣಮುಖರಾಗುವಂತೆ ಸ್ಪೀಕರ್ ಯುಟಿ ಖಾದರ್ ಹಾರೈಸಿದರು.
Next Story