ಮಲಾರ್ ಅರಸ್ತಾನ ದರ್ಗಾ ಶರೀಫ್ ಉರೂಸ್ ಸಮಾರೋಪ

ಕೊಣಾಜೆ: ಪಾವೂರು ಗ್ರಾಮದ ಮಲಾರ್ ಅರಸ್ತಾನದ ಅಲ್ ಮುಬಾರಕ್ ಜುಮಾ ಮಸ್ಜಿದ್ ಮತ್ತು ಅಲ್ ರಿಫಾಯಿಯ್ಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್‌ನ ೪೯ನೆ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಈ ರಾತೀಬ್, ಮಜ್ಲಿಸುನ್ನೂರ್ ಹಾಗೂ ಧಾರ್ಮಿಕ ಪ್ರವಚನ ಮತ್ತು ಅರಸ್ತಾನ ದರ್ಗಾ ಉರೂಸ್ ಸಮಾರೋಪವು ರವಿವಾರ ನಡೆಯಿತು.
ಜಮಾಅತ್ ಅಧ್ಯಕ್ಷ ಎಂ.ಪಿ. ಅಬ್ದುಲ್ ರಹ್ಮಾನ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಅಲ್-ಅಝ್‌ಹರಿ ಉದ್ಘಾಟಿಸಿದರು. ಮಸೀದಿಯ ಖತೀಬ್ ಮುಹಮ್ಮದ್ ಶಫೀಕ್ ಕೌಸರಿ ಕುಕ್ಕಾಜೆ, ಹಮೀದ್ ಫೈಝಿ ಕಿಲ್ಲೂರು, ಆರೀಫ್ ಬಾಖವಿ, ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮತಪ್ರವಚನಗೈದರು.
ಸಮಾರೋಪದಲ್ಲಿ ಸೈಯದ್ ಶರಫುದ್ದೀನ್ ತಂಳ್ ಫರೀದ್‌ನಗರ ದುಆಗೈದರು. ಮಾಜಿ ಖತೀಬ್ ಅಲ್ಹಾಜ್ ಎನ್.ಎಚ್. ಆದಂ ಫೈಝಿ ರಿಫಾಯಿ ರಾತೀಬ್‌ಗೆ ನೇತೃತ್ವ ನೀಡಿ ಮತಪ್ರವಚನಗೈದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ಮಸೀದಿಯ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು, ಹಂಝ ಮಲಾರ್, ಹಾಮದ್ ಅಲ್ತಾಫ್, ಉದ್ಯಮಿಗಳಾದ ಐ.ಎಸ್. ಹನೀಫ್, ಮಜೀದ್ ಎಂ.ಕೆ., ಪಾವೂರು ಗ್ರಾಪಂ ಅಧ್ಯಕ್ಷ ಮಜೀದ್ ಸಾತ್ಕೋ ಸದರ್ ಮುಅಲ್ಲಿಂ ಮುಹಮ್ಮದ್ ಶಹೀರ್ ಕೌಸರಿ, ಮುಅದ್ಸಿನ್ ಅಬ್ದುಲ್ ಜಬ್ಬಾರ್ ಯಮಾನಿ, ಸ್ಥಳೀಯ ಮಸೀದಿಗಳ ಅಧ್ಯಕ್ಷರಾದ ಅಜ್ಮೀರ್ ರಝಾಕ್ ಹಾಜಿ, ಎಸ್.ಎಂ. ಆಸೀಫ್ ಹಾಜಿ, ಶಾಹುಲ್ ಹಮೀದ್, ಸ್ಥಳೀಯ ಮಸೀದಿಯ ಖತೀಬರಾದ ಸೈಫುದ್ದೀನ್ ಬಾಖವಿ ಬೆಳ್ಳಾರೆ, ಅಬ್ದುಲ್ ಲತೀಫ್ ಸಖಾಫಿ, ಅಬ್ದುರ‌್ರಹ್ಮಾನ್ ಹನೀಫಿ ಕಕ್ಕಿಂಜೆ, ಜಮಾಅತ್‌ನ ಪದಾಧಿಕಾರಿಗಳಾದ ಇಮ್ತಿಯಾಝ್ ಬಿ, ಅಬ್ದುಲ್ ಸಮದ್ ಜಿ, ಆಸಿಫ್ ಅಕ್ಷರ ನಗರ, ನಿಝಾಮ್ ಮಲಾರ್, ರಿಝ್ವಾನ್ ಮಲಾರ್, ಆಸಿಫ್ ಎನ್, ಅಬ್ದುಲ್ ಸಲಾಂ ಎನ್, ಅಬ್ದುಲ್ ಸಮದ್ ಕೆ.ಎಂ, ಮಿಸ್ಬಾಹ್ ಮುನ್ನ ಅರಸ್ತಾನ, ಅಬ್ದುಲ್ ಮಜೀದ್ ಆರ್., ಅನ್ಸಾರ್ ಮಲಾರ್, ಯಹ್ಯಾ ಬೆಂಗರೆ ಮತ್ತಿತರರು ಭಾಗವಹಿಸಿದ್ದರು.







