ಕಲ್ಕಟ್ಟ ಶಾಲೆಯಲ್ಲಿ ಆಧಾರ್ ಶಿಬಿರಕ್ಕೆ ಚಾಲನೆ

ಮಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಉಳ್ಳಾಲ ತಾಲೂಕು ಘಟಕ, ಹಿದಾಯ ಫೌಂಡೇಶನ್ ಮಂಗಳೂರು, ಯು.ಆರ್. ಫೌಂಡೇಶನ್ ಮಂಗಳೂರು, ಆಧಾರ್ ಸೇವಾ ಕೇಂದ್ರ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮೂರು ಶಾಲೆಗಳಲ್ಲಿ ಐದು ದಿನಗಳು ನಡೆಯಲಿರುವ ಆಧಾರ್ ಶಿಬಿರಕ್ಕೆ ಮಂಜನಾಡಿ ಸಮೀಪದ ಕಲ್ಕಟ್ಟ ಸರಕಾರಿ ಪ್ರೌಢಶಾಲೆಯಲ್ಲಿ ಚಾಲನೆ ನೀಡಲಾಯಿತು.
ಉಳ್ಳಾಲ ನಗರಸಭೆಯ ಕೌನ್ಸಿಲರ್ ಹಾಗೂ ಮಸಾಪ ಉಳ್ಳಾಲ ಘಟಕದ ಪ್ರಧಾನ ಕಾರ್ಯದರ್ಶಿ ಯು.ಎಮ್.ಜಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಸಾಪ ಉಳ್ಳಾಲ ಘಟಕದ ಅಧ್ಯಕ್ಷೆ ಸಿಹಾನ ಬಿ.ಎಂ. ಮಕ್ಕಳ ಸಾಹಿತ್ಯ ಪರಿಷತ್ತಿನ ಪರಿಚಯದೊಂದಿಗೆ ಆಧಾರ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು.
ಕಲ್ಕಟ್ಟ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಲಲಿತಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಸಾಪ ಉಪಾಧ್ಯಕ್ಷೆ ದಾಕ್ಷಾಯಿಣಿ, ಸದಸ್ಯರಾದ ರಝಿಯಾ ಇಬ್ರಾಹೀಮ್, ಪ್ರೇಮ ಮೂಗಪ್ಪ, ಶಾಲೆಯ ಶಿಕ್ಷಕರಾದ ಭಾರತಿ, ಇಕ್ಬಾಲ್ ಉಪಸ್ಥಿತರಿದ್ದರು.
ಕಲ್ಕಟ್ಟ ಸರಕಾರಿ ಹಿಪ್ರಾ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು.