ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಕೆನರಾ ಕ್ಲಬ್‌ನ ಕೊಡುಗೆ ಅಪಾರ : ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮಂಗಳೂರು: ಜಿಲ್ಲೆಯ ಆರ್ಥಿಕ, ಸಾಮಾಜಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೆನರಾ ಕ್ಲಬ್‌ನ ಕೊಡುಗೆ ಅಪಾರ ಮತ್ತು ಅಮೂಲ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ.
ನಗರದ ಹೊರವಲಯದಲ್ಲಿರುವ ಗ್ರ್ಯಾಂಡ್ ಬೇ ಹೊರಾಂಗಣದಲ್ಲಿ ಕೆನರಾಕ್ಲಬ್‌ನ ಶತಮಾನೋತ್ಸವ ಸಂಭ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.
ಈ ಸಂಸ್ಥೆಯು ನಿರಂತರ ಪ್ರಗತಿ ಸಾಧಿಸಿ ದ್ವಿಶತಮಾನ ಆಚರಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶತಮಾನೋತ್ಸವ ಅಂಗವಾಗಿ ಸಂಸ್ಥೆಯ ಸದಸ್ಯ ವಸಂತ ಮಲ್ಯ ಸಂಪಾದಕೀಯ ಸದಸ್ಯರ ಕೈಪಿಡಿಯನ್ನು ಬಿಡುಗಡೆಗೊಳಿಸಿದರು ಮತ್ತು ಬ್ಯಾಡ್ಮಿಂಟನ್ ಮತ್ತು ಬಿಲ್ಲಿಯಡ್ಸ್ ಸ್ಪರ್ಧಾಕೂಟದ ವಿಜೇತರನ್ನು ಪ್ರಶಸ್ತಿ ನೀಡಿ ಅಭಿನಂದಿಸಿದರು.
ಸಂಸ್ಥೆಯ ಅಧ್ಯಕ್ಷ ಸುರೇಶ್‌ಚಂದ್ರ ಶೆಟ್ಟಿ ಸ್ವಾಗತಿಸಿ , ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯು ಪ್ರಸ್ತುತ 675 ಸದಸ್ಯ ರನ್ನು ಒಳಗೊಂಡಿದ್ದು ರಾಷ್ಟ್ರದ ಪ್ರತಿಷ್ಠಿತ 116 ಕ್ಲಬ್‌ನ ಸಹಯೋಗವನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಆಡಳಿತ ಸಮಿತಿ ಸದಸ್ಯರಾದ ರಾಜೇಶ್ ಬೇಕಲ್, ಮಲ್ಕಮ್ ಸಲ್ದಾನ, ಥೋಮಸ್ ಜಾರ್ಜ್ ಮತ್ತು ಡಾ. ಪ್ರಶಾಂತ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಯಂತ್ ಶೆಟ್ಟಿಯವರು ಶತಮಾನೋತ್ಸವದ ವರದಿ ವಾಚಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾಗಿ 50 ವರ್ಷವನ್ನು ಪೂರೈಸಿದ 11 ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು ಮತ್ತು ಮಾಜಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.
ಆಡಳಿತ ಮಂಡಳಿಯ ಸದಸ್ಯ ಮನೋರಾಜ್ ರಾಜೀವ್ ವಂದಿಸಿದರು. ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಗೋವಾ ರಾಜ್ಯದ ಖ್ಯಾತ ಸಂಗೀತ ತಂಡ ಸಭಿಕರನ್ನು ರಂಜಿಸಿತು.







