ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪ: ಮೂವರ ಬಂಧನ

ಮಂಗಳೂರು, ಜ.29: ಶಕ್ತಿನಗರದ ಬಾರೊಂದರ ಬಳಿ ಸೋಮವಾರ ಮಟ್ಕಾದಂಧೆ ನಡೆಸುತ್ತಿದ್ದ ಮೂವರನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹರೀಶ್ ಶೆಟ್ಟಿ, ಜನಾರ್ದನ, ಇಸಾಕ್ ಎಂಬವರು 100ರಿಂದ 999ರವರೆಗಿನ ಅಂಕೆಗಳಲ್ಲಿ ಯಾವುದಾದರೂ ಮೂರು ಅಂಕೆಗಳಿಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಪಡೆದುಕೊಂಡು, ನಾಗಾಲ್ಯಾಂಡ್ ರಾಜ್ಯದ ಲಾಟರಿ ಟಿಕೆಟ್ ಡ್ರಾ ಫಲಿತಾಂಶ ಅನುಸರಿಸಿ ಮಟ್ಕಾ ಜೂಜಾಟ ನಡೆಸುತ್ತಿದ್ದರು ಎನ್ನಲಾಗಿದೆ. ಆರೋಪಿಗಳಿಂದ 20,720 ರೂ. ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





