Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಸಾರ್ವಜನಿಕರಲ್ಲಿಯೂ ವಿಕಿರಣದ ಮಾಪನ...

ಸಾರ್ವಜನಿಕರಲ್ಲಿಯೂ ವಿಕಿರಣದ ಮಾಪನ ಅಗತ್ಯ: ಡಿ.ಕೆ.ಶುಕ್ಲಾ

ಐಎಆರ್‌ಪಿ 35ನೆ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ29 Jan 2025 9:59 PM IST
share
ಸಾರ್ವಜನಿಕರಲ್ಲಿಯೂ ವಿಕಿರಣದ ಮಾಪನ ಅಗತ್ಯ: ಡಿ.ಕೆ.ಶುಕ್ಲಾ

ಮಂಗಳೂರು: ಪರಮಾಣು ಸ್ಥಾವರಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರ ದೇಹದ ಮೇಲೆ ವಿಕಿರಣದ ಪರಿಣಾಮವನ್ನು ಮಾಪಬ ಮಾಡಿ ದಾಖಲಿ ಸಲಾಗುತ್ತದೆ. ಇದೇ ಮಾದರಿಯ ವಿಕಿರಣದ ಮಾಪನ ಮತ್ತು ದಾಖಲೀಕರಣ ಸಾರ್ವಜನಿಕರ ವಲಯದಲ್ಲಿ ಯೂ ನಡೆಯಬೇಕಾದ ಅಗತ್ಯವಿದೆ ಎಂದು ಭಾರತದ ಅಣುಶಕ್ತಿ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ದಿನೇಶ್ ಕುಮಾರ್ ಶುಕ್ಲಾ ತಿಳಿಸಿದ್ದಾರೆ.

ಅವರು ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಹಮ್ಮಿಕೊಂಡ ಇಂಡಿಯನ್ ಎಸೋಸಿಯೇಶನ್ ಫಾರ್ ರೇಡಿಯೇಶನ್ ಪ್ರೊಟೆಕ್ಷನ್ ಸಂಘಟನೆಯ (ಐಎಆರ್ ಪಿ) ಇದರ 35ನೆ ರಾಷ್ಟ್ರೀಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುಖ್ಯವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಉಪಕರಣಗಳ ಮೂಲಕ ವಿರಣದ ಬಳಕೆ ಮನುಷ್ಯನ ದೇಹದ ಮೇಲಾ ಗುತ್ತದೆ‌.ಆದರೆ ಒಬ್ಬ ವ್ಯಕ್ತಿಯ ದೇಹದ ಮೇಲೆ ವಿಕಿರಣದ ಪ್ರಮಾಣ ಎಷ್ಟಾಗಿದೆ ಎನ್ನುವು ದನ್ನು ಮಾಪನ ಮಾಡಿ ದಾಖಲಾತಿ ಮಾಡುವ ವ್ಯವಸ್ಥೆ ಇರುವುದಿಲ್ಲ.ಈ ರೀತಿಯ ಮಾಪನ ಮತ್ತು ದಾಖಲಾತಿ ಪ್ರತಿಯೊಬ್ಬರಿಗೂ ಅಗತ್ಯವಿದೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ಎಕ್ಸರೆ ಅಥವಾ ಇನ್ನಿತರ ಕ್ಷ ಕಿರಣದ ಚಿಕಿತ್ಸೆ ನಡೆದ ಬಳಿಕ ಇನ್ನೊಂದು ವೈದ್ಯರ ಬಳಿ ತೆರಳುವ ಸಂದರ್ಭದಲ್ಲಿ ಆತನ ಮೇಲೆ ಮತ್ತೆ ವಿಕಿರಣ ಪರೀಕ್ಷೆ ನಡೆಯುವ ಅಗತ್ಯ ಬೀಳಬಹುದು ಆಗ ಹಿಂದೆ ಎಷ್ಟು ಪ್ರಮಾಣದ ವಿಕಿರಣ ಆತನ ದೇಹದ ಮೇಲಾಗಿದೆ ಎನ್ನುವುದನ್ನು ತಿಳಿಯಲು ಈ ರೀತಿಯ ಮಾಪನ ಅಗತ್ಯವಿದೆ. ಪರಮಾಣು ಸ್ಥಾವರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಗಳ ಸುರಕ್ಷತೆಯ ದೃಷ್ಟಿಯಿಂದ ಈ ರೀತಿಯ ದಾಖಲಾತಿ(ಎನ್ ಒ ಡಿ ಆರ್ )ಇರುತ್ತದೆ ಇದೇ ಮಾದರಿಯನ್ನು ಸಾಋವಜನಿಕರಿಗೂ ದೊರಕುವಂತಾಗಬೇಕು ಎಂದರು.

*ಮುಖ್ಯ ಅತಿಥಿ ಬಾಬಾ ಪರಮಾಣು ಸಂಶೋಧನಾ ಕೇಂದ್ರದ ಆರೋಗ್ಯ ಮತ್ತು ಸುರಕ್ಷತಾ ಮತ್ತು ಪರಿಸರ ವಿಭಾಗದ ನಿರ್ದೇಶಕ ಡಾ.ಡಿ.ಕೆ.ಅಸ್ವಾಲ್ , ಮಾತನಾಡುತ್ತಾ, ಪರಮಾಣು ಶಕ್ತಿಯ ಉತ್ಪಾದನೆ ಯ ಬಗ್ಗೆ ನಿರ್ಲಕ್ಷ್ಯ ಬೇಡ, ಪರಮಾಣು ಶಕ್ತಿ ಪರಿಸರದಲ್ಲಿ ದೊರೆಯುವ ಒಂದು ಉತ್ತಮ ಶಕ್ತು ಮೂಲಕ ,ಹೆಚ್ಚು ಮಾಲಿನ್ಯ ಇಲ್ಲದೆ ಉತ್ಪಾದನೆ ಮಾಡವಹುದಾದ ಶಕ್ತಿಯ ಸಾಧನವಾಗಿದೆ ಈ ಬಗ್ಗೆ ಪರಿಸರ ಸಚಿವಾಲಯ ಗಮನಹರಿಸಿದರು ದೇಶದ ಅಭಿವೃದ್ಧಿ ಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ವಿನೋದ್ ಕುಮಾರ್ ಮಾತನಾಡುತ್ತಾ,ದೇಶದ ಮಹಾನ್ ದಾರ್ಶನಿಕ ಡಾ. ಹೋಮಿ ಭಾಭಾ, ಭಾರತದ ಪರಮಾಣು ಶಕ್ತಿ ಕಾರ್ಯಕ್ರಮಕ್ಕೆ ಅಡಿಪಾಯ ಹಾಕಿದರು. ಇಂದು, ಭಾರತವು 8,180 MW ಸ್ಥಾಪಿತ ಸಾಮರ್ಥ್ಯದೊಂದಿಗೆ 24 ಪರಮಾಣು ರಿಯಾಕ್ಟರ್‌ಗಳನ್ನು ನಿರ್ವಹಿಸುತ್ತಿದೆ. 8,700 MW ಸಂಯೋಜಿತ ಸಾಮರ್ಥ್ಯದೊಂದಿಗೆ ಹೆಚ್ಚುವರಿ 11 ರಿಯಾಕ್ಟರ್‌ಗಳು ನಿರ್ಮಾಣ ಹಂತದಲ್ಲಿವೆ.

1968 ರ ಹೊತ್ತಿಗೆ, ಅಯಾನೀಕರಿಸುವ ವಿಕಿರಣದ ಬಳಕೆಯು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಾಯಿತು. BARC ಯ ವಿಜ್ಞಾನಿಗಳ ಗುಂಪು, ವಿಕಿರಣ ಸುರಕ್ಷತೆಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ವೇದಿಕೆಯ ಬಗ್ಗೆ ಯೋಚಿಸಿದೆ. ಇದು 1969 ರಲ್ಲಿ ಇಂಡಿಯನ್ ಅಸೋಸಿಯೇಷನ್ ಫಾರ್ ರೇಡಿಯೇಶನ್ ಪ್ರೊಟೆಕ್ಷನ್ (IARP) ರಚನೆಗೆ ಕಾರಣವಾಯಿತು, ಇದು ವಿಕಿರಣ ರಕ್ಷಣೆಯಲ್ಲಿ ಸುರಕ್ಷತೆಯನ್ನು ಉತ್ತೇಜಿಸಲು ಮೀಸಲಾಗಿರುತ್ತದೆ. ಇಂದು, ಭಾರತದಾದ್ಯಂತ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕಿರಣ ಮೂಲಗಳ ತಜ್ಞರು ಮತ್ತು ಬಳಕೆದಾರರು ಐಎಆರ್ ಪಿಯ ಸದಸ್ಯರಾಗಿದ್ದಾರೆ.ಈ ಸಮ್ನೇಳನ ಸುಸ್ಥಿರ ಪರಮಾಣು ಶಕ್ತಿಗಾಗಿ ವಿಕಿರಣ ರಕ್ಷಣೆ ಧ್ಯೇಯ ದೊಂದಿಗೆ ನಡೆಯುತ್ತಿದೆ.

ವಿಶ್ವವು ಹವಾಮಾನ ಬದಲಾವಣೆಯನ್ನು "ನಮ್ಮ ಕಾಲದ ವ್ಯಾಖ್ಯಾನಿಸುವ ಸಮಸ್ಯೆ" ಎಂದು ಗುರುತಿಸಿದೆ. 2015 ರ ಪ್ಯಾರಿಸ್ ಒಪ್ಪಂದದ ಪ್ರಮುಖ ಗುರಿಯು ಕೈಗಾರಿಕಾ ಪೂರ್ವದ ಮಟ್ಟಗಳಿಗೆ ಹೋಲಿಸಿದರೆ ಜಾಗತಿಕ ತಾಪಮಾನದಲ್ಲಿ ವೈಜ್ಞಾನಿಕ ಒಮ್ಮತದ ಆಧಾರದ ಮೇಲೆ 1.5 °C ಮೌಲ್ಯವನ್ನು ಆಯ್ಕೆಮಾಡಲಾಗಿದೆ. ವಿದ್ಯುತ್ ಉತ್ಪಾದನೆಯಿಂದ ಕಾರ್ಬನ್ ಡೈಆಕ್ಸೈಡ್ ಮತ್ತು ಇತರ ಹಸಿರು ಮನೆ ಅನಿಲ ಹೊರಸೂಸುವಿಕೆ ಮತ್ತೊಂದು ಸಮಸ್ಯೆ ಯಾಗಿದೆ. ಇದು ಕಳೆದ14ವರ್ಷಗಳಲ್ಲಿ 40% ಕ್ಕಿಂತ ಹೆಚ್ಚು ಹೆಚ್ಚಾಗಿದೆ.

ಆದ್ದರಿಂದ ಕಳೆದ 20 ವರ್ಷಗಳಲ್ಲಿ, ಗಾಳಿ, ಸೌರ ಮತ್ತು ಇತರ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುವ ವಿದ್ಯುತ್ ಪ್ರಮಾಣವನ್ನು ಹೆಚ್ಚಿಸಲು ದೇಶಗಳು ಪ್ರಯತ್ನಗಳನ್ನು ಮಾಡಲಾಗುತ್ತಿವೆ.

ನಾವು ಯಾವುದೇ ನಿಯಂತ್ರಣ ಕ್ರಮಗಳನ್ನು ಅನ್ವಯಿಸದಿದ್ದರೆ, 2030 ರ ವೇಳೆಗೆ ನಾವು 1.5 °C ಮಿತಿಯನ್ನು ದಾಟುವ ಸಾಧ್ಯತೆಯಿದೆ ಎಂದು ಹವಾಮಾನ ಬದಲಾವಣೆಯ ಇಂಟರ್‌ಗವರ್ನಮೆಂಟಲ್ ಪ್ಯಾನಲ್ (IPCC) ಎಚ್ಚರಿಸಿದೆ.ನಾವು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕಾದರೆ ಜಗತ್ತು ಒಪ್ಪಿಕೊಂಡಿದೆ.

ಪರಮಾಣು ವಿದ್ಯುತ್ ಸ್ಥಾವರಗಳು ಅದರ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಉಂಟುಮಾಡುವುದಿಲ್ಲ. ಜಾಗತಿಕ ತಾಪಮಾನದ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಿಸುವ ಮೂಲಕ ಹವಾಮಾನ ಬದಲಾವಣೆಯನ್ನು ಎದುರಿಸಲು ಪರಮಾಣು ಶಕ್ತಿಯಯನ್ನು ಹೆಚ್ಚಿಸುವ ಅಗತ್ಯವಿದೆ ಎನ್ನುವುದು ಜಾಗತಿಕ ತೀರ್ಮಾನವಾಗಿದೆ.ಮಾನವಕುಲವು ಎದುರಿಸುತ್ತಿರುವ ಈ ಸವಾಲನ್ನು ಪರಿಹರಿಸುವಲ್ಲಿ ನಾವು ಕಾಯಲು ಸಾಧ್ಯವಿಲ್ಲ, ಏಕೆಂದರೆ ಹವಾಮಾನ ಬದಲಾವಣೆಯ ಪರಿಣಾಮಗಳು ಬಡವರು ಮತ್ತು ಅತ್ಯಂತ ದುರ್ಬಲರನ್ನು ಮೇಲಾಗುತ್ತದೆ ಎಂದರು.

ಸಮಾರಂಭದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಸಚಿವ ರಾಜು ಮೊಗವೀರ ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯ ವಿಶ್ವ ವಿದ್ಯಾ ನಿಲಯದ ಕುಲಪತಿ ಡಾ.ವಿಜಯ ಕುಮಾರ್, ಸಮ್ನೇಳನದ ಸಂಚಾಲಕ ಪ್ರೊ.ಕರುಣಾಕರ ಉಪಸ್ಥಿತರಿದ್ದರು.ಐಎಆರ್ ಪಿ ಅಧ್ಯಕ್ಷ ಡಾ.ಪ್ರಬಾಲ್ ಚೌಧರಿ ಸ್ವಾಗತಿಸಿದರು. ಪ್ರೊ.ಮಂಜಯ್ಯ ವಂದಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X