ಮಂಜನಾಡಿ: ಕಸ ವಿಲೇವಾರಿಗೆ ಒತ್ತಾಯಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಮನವಿ

ಮಂಜನಾಡಿ: ಗ್ರಾಮದ ಅನ್ಸಾರ್ ನಗರದ ಬಸ್ಸು ನಿಲ್ದಾಣ ಹಿಂಭಾಗ ಇರುವ ಚರಂಡಿಯ ಗುಂಡಿಯಲ್ಲಿ ಕಸದ ರಾಶಿ ತುಂಬಿದ್ದು ದುರ್ನಾತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಅದನ್ನು ಸ್ವಚ್ಛಗೊಳಿಸಲು ಒತ್ತಾಯಿಸಿ ಡಿವೈಎಫ್‌ಐ ವತಿಯಿಂದ ಮಂಜನಾಡಿ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು.
ತ್ವರಿತವಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮಂಜನಾಡಿ ಗ್ರಾಮದ ಅನ್ಸಾರ್ ನಗರದ ಬಸ್ಸು ನಿಲ್ಯಾಣ ಹಿಂಭಾಗ ಇರುವ ಚರಂಡಿಯ ಗುಂಡಿಯಲ್ಲಿನ ಕಸದ ರಾಶಿಯನ್ನು ವಿಲೇವಾರಿಯ ವ್ಯವಸ್ಥೆ ಮಾಡಬೇಕು. ಮನೆ ಮನೆಗೆ ಕಸ ವಿಲೇವಾರಿ ವಾಹನಗಳು ಬಂದರೂ ಕಸ ಸಂಗ್ರಹಿಸಿ ನೀಡದವರ ವಿರುದ್ಧ ಹಾಗೂ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ನೇತೃತ್ವದ ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.
Next Story





