ಕುರ್ನಾಡು ಗ್ರಾಮ ಪಂಚಾಯತ್: ಅಧ್ಯಕ್ಷರಾಗಿ ಪ್ರೇಮಾ ಗಟ್ಟಿ ಅವಿರೋಧ ಆಯ್ಕೆ

ಕೊಣಾಜೆ: ಕುರ್ನಾಡು ಗ್ರಾಮ ಪಂಚಾಯತ್ ನ ಮುಂದಿನ 15 ತಿಂಗಳ ಆಡಳಿತಕ್ಕೆ ಮೂರನೇ ಅವಧಿಯ ಅಧ್ಯಕ್ಷರಾಗಿ ಪ್ರೇಮಾ ಗಟ್ಟಿ ಕುರ್ನಾಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ನಂತರ ಕುರ್ನಾಡು ಪಂಚಾಯತಲ್ಲಿ ಮೂರನೇ ಭಾರಿ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಡೆದಿದೆ.ಈ ಹಿಂದೆ ಎರಡನೇ ಅವಧಿಗೆ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಬೆಂಬಲಿತ ಲೋಲಾಕ್ಷಿ ಅವರು ರಾಜೀನಾಮೆ ನೀಡಿದ್ದರು. ಪಂಚಾಯತ್ ನ ಎರಡನೇ ಅವಧಿಯ ಆಡಳಿತಕ್ಕೆ ಎರಡೂವರೆ ವರ್ಷಗಳ ಕಾಲ ಆಡಳಿತಾವಧಿಗೆ 15 ತಿಂಗಳ ಒಪ್ಪಂದ ಮಾಡಿದ್ದ ಹಿನ್ನಲೆಯಲ್ಲಿ ಚುನಾವಣೆ ಬಳಿಕ ಮೂರನೇ ಅಧಿಕಾರವಧಿಗೆ ಮೂರನೇ ಅಧ್ಯಕ್ಷೆಯ ಆಯ್ಕೆ ಪ್ರಕ್ರಿಯೆ ನಡೆದಿದೆ.
ಗುರುವಾರದಂದು ಚುನಾವಣಾಧಿಕಾರಿ ಉಳ್ಳಾಲ ತಹಶೀಲ್ದಾರ್ ಡಿ.ಎ ಪುಟ್ಟರಾಜು ಅವರ ಸಮಕ್ಷಮದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದೆ.ಅಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಗಟ್ಟಿ ಅವರಿಂದ ಏಕೈಕ ನಾಮ ಪತ್ರ ಸಲ್ಲಿಕೆಯಾಗಿದ್ದು, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 7 ಸದಸ್ಯರಿರುವ ಕುರ್ನಾಡು ಗ್ರಾಮ ಪಂಚಾಯತ್ ಆಡಳಿತದಲ್ಲಿ ಕಾಂಗ್ರೆಸ್ ಬೆಂಬಲಿತ 4,ಬಿಜೆಪಿ ಬೆಂಬಲಿತ 3 ಸದಸ್ಯರಿದ್ದಾರೆ. ಚುನಾವಣೆ ಬಳಿಕ ಪಂಚಾಯತ್ ಆಡಳಿತದ ಮೊದಲ ಎರಡೂವರೆ ವರುಷದ ಅವಧಿಯಲ್ಲಿ ಪ್ರೇಮಾ ಗಟ್ಟಿ ಅವರು ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.
ಚುನಾವಣೆ ನಂತರ ಗಣೇಶ್ ನಾಯ್ಕ್ ,ಲೋಲಾಕ್ಷಿ,ಇದೀಗ ಪ್ರೇಮಾ ಗಟ್ಟಿ ಕುರ್ನಾಡು ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿದ್ದಾರೆ. ಕುರ್ನಾಡು ಗ್ರಾ.ಪಂ ಪಂಚಾಯತ್ ಉಪಾಧ್ಯಕ್ಷರಾದ ಎಂ.ಕೆ ಅಶ್ರಫ್ ,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್. ಗಟ್ಟಿ,ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ಕುರ್ನಾಡು ಪಂಚಾಯತ್ ನ ಮಾಜಿ ಅಧ್ಯಕ್ಷರುಗಳಾದ ಲೋಲಾಕ್ಷಿ, ದೇವದಾಸ್ ಭಂಡಾರಿ, ಸೂಪಿ ಕುಂಞ, ಝಬೇರ್ ತಲೆಮೊಗರು, ಪ್ರಮುಖರಾದ ಡಾ.ಸುರೇಖ,ಬೊಲ್ಮ ಮೇಲ್ತೋಟ ಶ್ರೀ ವೈದ್ಯನಾಥ ಧರ್ಮಚಾವಡಿ ತ್ಯಾಂಪಗಟ್ಟಿ ಕುಟುಂಬಸ್ಥರ ಟ್ರಸ್ಟ್ ನ ಅಧ್ಯಕ್ಷರಾದ ಮನೋಹರ ಗಟ್ಟಿ,ಪ್ರದಾನ ಕಾರ್ಯದರ್ಶಿ ಶೈಲೇಶ್ ಗಟ್ಟಿ ಪಿಲಾರು ಮೊದಲಾದ ಗಣ್ಯರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.







