ಜನ ಶಿಕ್ಷಣ ಟ್ರಸ್ಟ್‌ನ ವಿಧಾನದ ಚರ್ಚೆಗೆ ಸೂಚನೆ: ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರಿಂದ ದ.ಕ.ಜಿಲ್ಲಾಧಿಕಾರಿಗೆ ನಿರ್ದೇಶನ

ಮಂಗಳೂರು: ಜಿಲ್ಲೆಯಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಶಿಕ್ಷಣ ಟ್ರಸ್ಟ್‌ನವರು ಸೂಚಿಸಿರುವ ವಿಧಾನ ವನ್ನು ಕಾರ್ಯಗತಗೊಳಿಸುವ ಕುರಿತು ಚರ್ಚಿಸಿ ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್‌ರವರು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿಗೆ ಈ ಬಗ್ಗೆ ತಮ್ಮ ಪತ್ರದ ಮೂಲಕ ತಿಳಿಸಿರುವ ಜಿಲ್ಲಾ ಉಸ್ತುವಾರಿ ಸಚಿವರು, ಪ್ಲಾಸ್ಟಿಕ್ ಹಾಗೂ ಇತರ ಘನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಆಗುತ್ತಿರುವ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಸಲುವಾಗಿ ಮೂಲದಲ್ಲೇ ಕಸವನ್ನು ಹಸಿ, ಒಣ ಮತ್ತು ಅಪಾಯಕಾರಿ ಕಸಗಳನ್ನು ವಿಂಗಡಿಸುತ್ತಿರುವ ಕುಟುಂಬಗಳು ಹಾಗೂ ವಾಣಿಜ್ಯ ಮಳಿಗೆಗಳ ಮುಖ್ಯಸ್ಥರು ಸ್ವಚ್ಛತೆಯ ಘೋಷಣಾ ಪತ್ರ ಸಲ್ಲಿಸುವ ಬಗ್ಗೆ ಜನ ಶಿಕ್ಷಣ ಟ್ರಸ್ಟ್‌ನವರು ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.
ಜನಶಿಕ್ಷಣ ಟ್ರಸ್ಟ್ ವತಿಯಿಂದ ಬಯಲು ಕಸಾಲಯ ಮುಕ್ತ ಸುಸ್ಥಿರ ಸ್ವಚ್ಛ ಗ್ರಾಮಗಳ ನಿರ್ಮಾಣ ಮತ್ತು ನಿರಂತರ ನಿರ್ವಹಮೆಗೆ ಸ್ವಚ್ಛ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣಾ ಪತ್ರಗಳನ್ನು ಸಲ್ಲಿಸುವ ಕುರಿತಂತೆ ಸ್ಪೀಕರ್, ಉಸ್ತುವಾರಿ ಸಚಿವರು ಸೇರಿದಂತೆ ಇತರರಿಗೆ ಮನವಿ ಸಲ್ಲಿಕೆಯಾಗಿತ್ತು.
2017-18ನೆ ಸಾಲಿನಲ್ಲಿ ಪ್ರಾಯೋಗಿಕವಾಗಿ ಬಾಳೆಪುಣಿ, ಬನ್ನೂರು, ಲಾಯಿಲ ಗ್ರಾ.ಪಂಗಳಲ್ಲಿ ಸ್ವಚ್ಚ ಮನೆ ಸ್ವಯಂ ಘೋಷಣಾ ಪತ್ರಗಳನ್ನು ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿಯವರ ಸಚಿವಾಲಯದ ಅಧೀನ ಕಾರ್ಯದರ್ಶಿ ಬರೆದ ಉಲ್ಲೇಖಿತ ಪತ್ರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರದ ಪ್ರಧಾನ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಿದ್ದರು. ಘನ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಯಿಂದ ಪರಿಸರ ಮಾಲಿನ್ಯ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಸಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ಸುಡುವುದು ಕಾನೂನು ಬಾಹಿರ ಶಿಕ್ಷಾರ್ಹ ಅಪರಾಧವೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. 2016ರಲ್ಲಿ ಅಕ ಬಳಕೆ ಪಾಸ್ಟಿಕ್ ನಿಷೇಧ ಕಾಯಿದೆ ಜಾರಿಗೆ ತರಲಾಗಿದೆ. ಕೇಂದ್ರ ಸರಕಾರವೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಆದೇಶ ಹೊರಡಿಸಿದ್ದರೂ ಜಿಲ್ಲೆಯ ಎಲ್ಲ ಗ್ರಾ.ಪಂಗಳಲ್ಲಿ ಬಯಲು ಕಸಾಲಯಗಳು ಬೆಳೆಯುತ್ತಿವೆ. ಜನಶಿಕ್ಷಣ ಟ್ರಸ್ಟ್‌ನ ಪ್ರೇರಣೆಯಿಂದ ಮೂಲದಲ್ಲೇ ಕಸ ವಿಂಗಣೆ ಸಮರ್ಪಕವಾಗಿ ನಿರ್ವಹಿಸುತ್ತಿರುವ ಕೆಲವು ಕುಟುಂಬಗಳ ಮುಖ್ಯಸ್ಥರು ಸ್ವಯಂ ಘೋಷಣಾ ಪತ್ರಗಳನ್ನು ಗ್ರಾಪಂಗೆ ಸಲ್ಲಿಸುತ್ತಿದ್ದಾರೆ. ಈ ಬಗ್ಗೆ ಆದ್ಯತೆಯಲ್ಲಿ ಪರಿಶೀಲಿಸಿ ಜಿಲ್ಲೆಯಾ ದ್ಯಂತ ಅಳವಡಿಸಲು ಕ್ರಮ ವಹಿಸಬೇಕು ಎಂದು ಟ್ರಸ್ಟ್‌ನ ನಿರ್ದೇಶಕ ಹಾಗೂ ಮಾಜಿ ಮನ್‌ರೇಗಾ ಮಾಜಿ ಒಂಬುಡ್ಸ್‌ಮೆನ್ ಎನ್. ಶೀನ ಶೆಟ್ಟಿ ಉಸ್ತುವಾರಿ ಸಚಿವರಿಗೆ ಕಳೆದ ಡಿಸೆಂಬರ್‌ನಲ್ಲಿ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದರು.