ಗಾಂಜಾ ಸೇವನೆ ಆರೋಪ: ಮೂವರ ಬಂಧನ

ಮಂಗಳೂರು, ಜ.30: ನಗರದ ವಿವಿಧೆಡೆ ಗಾಂಜಾ ಸೇವನೆಗೈದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಂಡೇಶ್ವರ ಠಾಣಾ ವ್ಯಾಪ್ತಿಯ ಮಹಾಕಾಳಿಪಡ್ಪು ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ವಳಚ್ಚಿಲ್‌ಪದವು ನಿವಾಸಿ ಚಂದ್ರಶೇಖರ್ (30) ಮತ್ತು ಬರ್ಕೆ ಠಾಣಾ ವ್ಯಾಪ್ತಿಯ ಲಾಲ್‌ಬಾಗ್ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೇರಳದ ಕೊಟ್ಟಾಯಂನ ಅಲೆನ್ ಸಿಬಿ (19) ಹಾಗೂ ಬಂದರ್ ಠಾಣಾ ವ್ಯಾಪ್ತಿಯ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೇರಳದ ತ್ರಿಶ್ಶೂರು ಜಿಲ್ಲೆಯ ನಿವಾಸಿ, ಕದ್ರಿಯ ಪಿಜಿಯಲ್ಲಿ ವಾಸವಾಗಿದ್ದ ಬಾಬಿನ್ ಸೆಬಾಸ್ಟಿಯನ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story