ಕೊಡಾಜೆ: ತರ್ಬಿಯತುಲ್ ಇಸ್ಲಾಂ ಮದ್ರಸದ ರಕ್ಷಕ-ಶಿಕ್ಷಕರ ಸಭೆ

ಬಂಟ್ವಾಳ : ಕೊಡಾಜೆ ಬದ್ರಿಯಾ ಜುಮಾ ಮಸೀದಿ ಅಧೀನದ ತರ್ಬಿಯತುಲ್ ಇಸ್ಲಾಂ ಮದ್ರಸದ ರಕ್ಷಕ-ಶಿಕ್ಷಕರ ಸಭೆಯು ಮದ್ರಸ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಸಭೆಯನ್ನು ಉದ್ಘಾಟಿಸಿದ ಸ್ಥಳೀಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಮಾತನಾಡಿ, ವಿದ್ಯಾರ್ಥಿಗಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ರಕ್ಷಕರು ಹಾಗೂ ಶಿಕ್ಷಕರ ಜವಾಬ್ದಾರಿ ಮಹತ್ತರವಾಗಿದ್ದು, ಮಸೀದಿ ಆಡಳಿತ ಸಮಿತಿಯ ಸಹಕಾರವೂ ಅತೀ ಅಗತ್ಯವಾಗಿದೆ ಎಂದರು.
ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ನೇರಳಕಟ್ಟೆ ಅಧ್ಯಕ್ಷತೆ ವಹಿಸಿದ್ದರು.
ಮಸೀದಿ ಪ್ರಧಾನ ಕಾರ್ಯದರ್ಶಿ ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ ಹಾಗೂ ಮದ್ರಸ ಮುಖ್ಯ ಶಿಕ್ಷಕ ಪಿ.ಎ. ಝಕರಿಯಾ ಅಸ್ಲಮಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಸೀದಿ ಆಡಳಿತ ಸಮಿತಿಯ ಉಪಾಧ್ಯಕ್ಷ ಸಿದ್ದೀಕ್ ಪರ್ಲೊಟ್ಟು, ಕೋಶಾಧಿಕಾರಿ ಪಿ.ಕೆ.ಅಬ್ಬಾಸ್ ಪರ್ಲೋಟ್ಟು, ಕಾರ್ಯದರ್ಶಿ ಶಾಹುಲ್ ಹಮೀದ್ ಪರ್ಲೊಟ್ಟು, ಸದಸ್ಯರಾದ ಫಾರೂಕ್ ಗೋಳಿಕಟ್ಟೆ, ಇಸ್ಮಾಯೀಲ್ ನೇರಳಕಟ್ಟೆ, ಮದ್ರಸ ಶಿಕ್ಷಕರುಗಳಾದ ಮಕ್ಬೂಲ್ ಫೈಝಿ, ಅಬ್ದುಲ್ ರಶೀದ್ ಅಝ್ಅರಿ, ಹಾರಿಸ್ ಮುಸ್ಲಿಯಾರ್, ಅಶ್ರಫ್ ಯಮಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಸೀದಿ ಆಡಳಿತ ಸಮಿತಿ ಸದಸ್ಯ, ಪತ್ರಕರ್ತ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.







