ಪಚ್ಚನಾಡಿಯಲ್ಲಿ ಅನಧಿಕೃತ ಮನೆಗಳ ನಿರ್ಮಾಣ ಆರೋಪ: ಕಾಮಗಾರಿ ತಡೆಗೆ ಮನಪಾ ನೋಟಿಸ್

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಯ ಪಚ್ಚನಾಡಿ ಗ್ರಾಮದ ಸರ್ವೇ ನಂ.61/13ರಲ್ಲಿ ನಗರ ಪಾಲಿಕೆಯ ಅನುಮತಿ ಪಡೆಯದೆ ಮನೆ ನಿರ್ಮಿಸುವುದರ ವಿರುದ್ಧ ಮನಪಾ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ತಕ್ಷಣದಿಂದ ಜಾರಿಗೆ ಬರುವಂತೆ ನೋಟಿಸ್ ಜಾರಿಗೊಳಿಸಿ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ.
ಮಹಾನಗರಪಾಲಿಕೆಯ ಅನುಮತಿ ಪಡೆಯದೆ ವಿಜಯ ಎಂಬವರು ೬ ಮನೆಗಳನ್ನು ನಿರ್ಮಿಸುತ್ತಿದ್ದು, ಜ.30ರಂದು ಮನಪಾ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರು ನೊಟೀಸು ಜಾರಿ ಮನೆಗಳ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದ್ದಾರೆ. ‘ಕಟ್ಟಡ ನಿರ್ಮಾಣ ಕಾರ್ಯಕ್ಕೆ ಕಡ್ಡಾಯವಾಗಿ ಪರವಾನಗಿ ಪಡೆದುಕೊಳ್ಳಬೇಕು. ತಪ್ಪಿದಲ್ಲಿ ಕೆಎಂಸಿ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.
Next Story