ಕುದ್ರೋಳಿ: ಮುಸ್ಲಿಂ ಐಕ್ಯತಾ ವೇದಿಕೆಯಿಂದ ವೈದ್ಯಕೀಯ ಶಿಬಿರ

ಮಂಗಳೂರು: ಕುದ್ರೋಳಿಯ ಮುಸ್ಲಿಂ ಐಕ್ಯತಾ ವೇದಿಕೆಯ ವತಿಯಿಂದ ಯೆನೆಪೋಯ ಸಮುದಾಯ ವೈದ್ಯಕೀಯ ವಿಭಾಗದ ಸಹಕಾರದಲ್ಲಿ ವೈದ್ಯಕೀಯ ಶಿಬಿರವು ರವಿವಾರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಯಾಸೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಯಾಗಿ ಜಾಮಿಯ ಮಸೀದಿಯ ಖಾಝಿ ಮುತಹರ್ ಹುಸೈನ್ ಭಾಗವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ವೈದ್ಯರುಗಳಾದ ಇಮಾದ್, ಮುಹಮ್ಮದ್ ಇಸ್ಮಾಯಿಲ್, ಅಪೂರ್ವ ಕೋಟ್ಯಾನ್, ರೇಷ್ಮಾ ಟಿಎನ್ ಹಾಗೂ ಅಬ್ದುಲ್ ಕಲೀಲ್ ಜಾಮಿಯ, ಹಾಜಿ ಶಂಸುದ್ದೀನ್ ಕುದ್ರೋಳಿ, ಮಕ್ಬೂಲ್ ಅಹ್ಮದ್ ಜಾಮಿಯ, ಮಾಜಿ ಮೇಯರ್ ಕೆ. ಅಶ್ರಫ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಮಕ್ಬೂಲ್ ಜಮಾಅತ್, ಮುಝೈರ್ ಅಹ್ಮದ್, ಇಸ್ಮಾಯಿಲ್ ಬಿ.ಎ., ವಹಾಬ್ ಕುದ್ರೋಳಿ, ಎನ್.ಕೆ.ಅಬೂಬಕ್ಕರ್, ಮುಸ್ತಾಕ್ ಅಹ್ಮದ್ , ಕೆ.ಕೆ. ಲತೀಫ್, ಲತೀಫ್ ಕ್ರಿಸ್ಟಲ್, ಅಶ್ರಫ್ ಕಿನಾರ ಉಪಸ್ಥಿತರಿದ್ದರು.
ಸಂಸ್ಥೆಯ ಕಾರ್ಯದರ್ಶಿ ಹಾಜಿ ಬಿ. ಅಬೂಬಕ್ಕರ್ ಸ್ವಾಗತಿಸಿದರು. ಅಝೀಝ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.
Next Story