ಮಂಗಳೂರು ವಿವಿ ವಾಣಿಜ್ಯ ವಿಭಾಗದಲ್ಲಿ ಕಾರ್ಯಾಗಾರ

ಮಂಗಳೂರು: ಮಂಗಳೂರು ವಿವಿಯ ವಾಣಿಜ್ಯ ವಿಭಾಗದಲ್ಲಿ ಱಆರ್ಥಿಕ ಯೋಜನೆ: ಮೂಲಭೂತ ಅಂಶಗಳಿಗೆ ಮರಳುವಿಕೆ ಕುರಿತ ಕಾರ್ಯಾಗಾರವು ನಡೆಯಿತು.
ಆರ್ಥಿಕ ಯೋಜನೆ ಮತ್ತು ನಿರ್ವಹಣೆಯಲ್ಲಿ ಪರಿಣಿತರಾದ ಲಿಯೋ ಅಮಲ್ ಎ., ಫ್ರಾಂಕ್ಲಿನ್ ಟೆಂಪಲ್ಟನ್ ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ವಾಣಿಜ್ಯ ವಿಭಾಗದ ಅಧ್ಯಕ್ಷೆ ಡಾ. ಪ್ರೀತಿ ಕೀರ್ತಿ ಡಿಸೋಜ ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆರ್ಥಿಕ ಜ್ಞಾನವನ್ನು ನೀಡುವಲ್ಲಿ ಕಾರ್ಯಗಾರವು ಮಹತ್ವದ ಹೆಜ್ಜೆಯಾಗಿದೆ. ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಆರ್ಥಿಕ ಯೋಜನೆಯ ಪ್ರಾಮುಖ್ಯತೆಯ ಬಗ್ಗೆ ಅರಿವಾಗಲಿದೆ ಎಂದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ಸ್ಟಾಫ್ ಕೋ-ಆರ್ಡಿನೆೇಟರ್ ಗುರುರಾಜ್ ಪಿ. ಮತ್ತು ವೈಶಾಲಿ ಕೆ. ಉಪಸ್ಥಿತರಿದ್ದರು.
Next Story