ಆತೂರು ಹಫ್ವಾ ಕುಟುಂಬ ಸಮ್ಮಿಲನ

ಆತೂರು: ಮರ್ಹೂಂ ಹಾಜಿ ಅಬೂಬಕ್ಕರ್ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಶನ್ ಆತೂರು ಇದರ 11ನೇ ವರ್ಷದ ಹಫ್ವಾ ಕುಟುಂಬ ಸಮ್ಮಿಲನದ ಸಮಾರೋಪವು ರವಿವಾರ ಆತೂರಿನಲ್ಲಿ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರೇರಣಾ ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ ಮಕ್ಕಳ ಬೆಳವಣಿಗೆ ಯಲ್ಲಿ ಸದಾ ಕ್ರಿಯಾಶೀಲರಾಗಿ ಅವರನ್ನು ಹೆಜ್ಜೆ ಹೆಜ್ಜೆಗೂ ಗಮನಿಸುತ್ತಾ ಒಳಿತಿನ ಹಾದಿಯಲ್ಲಿ ಸಾಗುವಂತೆ ಹೆತ್ತವರು ಮಾಡಬೇಕು. ಮಕ್ಕಳನ್ನು ಸಮಾಜದ ಶ್ರೇಷ್ಠ ಸಾಧಕರಾಗಿ ಪರಿವರ್ತನೆ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ. ಅತಿಯಾದ ಮೊಬೈಲ್ ಬಳಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅಡ್ಡಿಪಡಿಸುವ ಅಪಾಯವಿದೆ. ಈ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು ಎಂದರು.
ಜಿ.ಎಂ.ಮುಹಮ್ಮದ್ ಕುಂಞಿಯ ಅಧ್ಯಕ್ಷತೆ ವಹಿಸಿದ್ದರು. ಉಬೈದುಲ್ಲಾ ಆಶ್ರಫಿ ಬಂದ್ಯೋಡು ಕಾರ್ಯಕ್ರಮ ಉದ್ಘಾಟಿಸಿದರು. ಅಡ್ವೋಕೇಟ್ ಖಲಂದರ್ ಪೆರ್ಜಿ ಸಹಿತ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು.
ಸಂಘಟನೆಯ ಗೌರವಾಧ್ಯಕ್ಷರಾಗಿದ್ದ ಮರ್ಹೂಂ ಅಬ್ದುಲ್ ರಹಿಮಾನ್ ಹಾಜಿ ಬಡ್ಡಮೆ ಹಾಗು ಸಲಹೆಗಾರ ಇಬ್ರಾಹಿಂ ಜೋಗಿಬೆಟ್ಟು ಅವರನ್ನು ಸ್ಮರಿಸಲಾಯಿತು.
ಈ ಸಂದರ್ಭ ಕುಟುಂಬಸ್ಥರಾದ ಎ.ಎಂ. ಅಬೂಬಕ್ಕರ್ ಹಾಜಿ, ಎನ್.ಇಬ್ರಾಹಿಂ ಹಾಜಿ ಜೇಡರ ಪೇಟೆ, ಇಕ್ಬಾಲ್ ಪಿ.ಬಿ., ಇಬ್ರಾಹಿಂ ಹಾಜಿ, ಪುತ್ತೂಮೋನು ಬಾವ, ಯೂಸುಫ್ ಮದನಿ, ರಶೀದ್ ಹಾಜಿ, ಸಿರಾಜ್ ಬಡ್ಡಮೆ, ಎ.ಎಂ.ಮೋನುಂಞಿ, ಮುಸ್ತಾಫಾ ಮಠ, ಹಾಜಿ ಹುಸೈನ್ ಸಿರಾಜ್, ಸುಲೈಮಾನ್ ಹಾಜಿ ಬೀಜತ್ತಲಿ, ಬಶೀರ್ ಪೆರ್ಜಿ, ಚೆರೆಮೋನು ಅಜಿಲಮೊಗರು, ಅಬ್ದುಲ್ ಖಾದರ್ ಆರ್. ಕೆ. ಅಬ್ದುಲ್ ರಝಾಕ್, ಅಶ್ರಫ್ ಕರಾಯ, ಎ.ಎಸ್, ಹಮೀದ್ ಮಿತ್ತೂರು, ಯಾಕೂಬ್ ಮದನಿ, ಜಲೀಲ್ ದಾರಿಮಿ, ಹೈದರ್ ಕಲಾಯಿ, ಹಂಝ ಸಖಾಫಿ, ಹಮೀದ್ ಮುಸ್ಲಿಯಾರ್, ಶಾಕಿರ್ ನಿಝಾಮಿ, ಬದ್ರುದ್ದೀನ್ ಸಅದಿ, ಅಬ್ದುಲ್ ಖಾದರ್ ಎ. ಎಸ್, ಹಾಜಿ ರಫೀಕ್ ಮಕ್ಕ, ಮುಸ್ತಾಫಾ ಜೋಗಿಬೆಟ್ಟು, ಝಕರಿಯ ಮುಸ್ಲಿಯಾರ್, ಹಂಝ ಕೋಡಿಂಬಾಡಿ, ಅಬೂಬಕ್ಕರ್ ಎನ್., ಉಸ್ಮಾನ್ ಕಲ್ಲೆರಿ, ಹಸೈನಾರ್ ಹಾಜಿ ಕೊಡಿಪ್ಪಾಡಿ, ನವಾಝ್ ಪೇರಮೊಗರು, ವೈ.ಇಬ್ರಾಹಿಂ, ಬಶೀರ್ ಶಾಹ್, ಹಂಝ ಬಡ್ಡಮೆ, ಎ. ಎಸ್. ಅಬ್ದುಲ್ ಖಾದರ್, ರಹ್ಮಾನ್ ಬಡ್ಡಮೆ, ಶೌಕತ್ ಜೇಡರಪೇಟೆ, ಖಾದರ್ ಡಿಲೈಟ್, ಉಮರ್ ಪಿಲಿಕುಡೆಲ್, ಸಫ್ವಾನ್ ಜೋಗಿಬೆಟ್ಟು, ಅಬ್ದುಲ್ ರಹಿಮಾನ್ ಅಂದು, ನಾಸಿರ್ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಯನ ಶಿಬಿರದಲ್ಲಿ ಜುನೈದ್ ಜೆಫ್ರಿ ತಂಳ್ ದುಆಗೈದರು. ಖತೀಬ್ ಆಸಿಫ್ ಅಝ್ಹರಿ ಉದ್ಘಾಟಿಸಿದರು. ಸ್ವಲಾಹುದ್ದೀನ್ ಸಖಾಫಿ ದಿಕ್ಸೂಚಿ ಭಾಷಣಗೈದರು. ಪ್ರಧಾನ ಕಾರ್ಯದರ್ಶಿ ಹಕೀಮ್ ಕೆಮ್ಮಾರ ಸ್ವಾಗತಿಸಿದರು. ಝುಬೈರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು.