ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಜೈಲುಶಿಕ್ಷೆ, ದಂಡ

ಮಂಗಳೂರು: ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಿವಾಸಿ, ಬ್ರಹ್ಮಾವರದ ವಿ5 ಟೆಕ್ ಇಂಜಿನಿಯರಿಂಗ್ ವರ್ಕ್ಸ್ ಮಾಲಕ ನವೀನ್ ಆಚಾರ್ಯನಿಗೆ ಮಂಗಳೂರು 9ನೇ ಜೆಎಂಎಫ್‌ಸಿ ನ್ಯಾಯಾಲಯ 3,03,000 ರೂ. ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಲು ಆದೇಶ ಹೊರಡಿಸಿದೆ.
ಮಂಗಳೂರಿನ ಪ್ರೈಮ್ ಸ್ಪೋರ್ಟ್ಸ್ ಕಂಪನಿಯಿಂದ ಕ್ರೀಡಾ ಸಾಮಗ್ರಿ ಖರೀದಿಸಿದ ಆರೋಪಿ ನವೀನ್ ಆಚಾರ್ಯ ಪಾವತಿಗೆ ಚೆಕ್ ನೀಡಿದ್ದರೂ ಅದು ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಡಾ. ಶಿಲ್ಪಾ ಬ್ಯಾಡಗಿ ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.
Next Story





