ಆನ್‌ಲೈನ್ ವಂಚನೆ: ಪ್ರಕರಣ ದಾಖಲು

ಮಂಗಳೂರು, ಫೆ.4: ಸ್ಟಾಕ್ ಕಮ್ಯೂನಿಟಿಗೆ ಸಂಬಂಧಿಸಿ ವಾಟ್ಸ್‌ಆ್ಯಪ್ ಮೂಲಕ ಬಂದ ಸಂದೇಶವನ್ನು ನಂಬಿ 13,09,245 ರೂ. ಕಳೆದುಕೊಂಡಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಗೆ ವಿಐಪಿ3 ಗ್ಲೋಬಲ್ ಸೆಕ್ಯುರಿಟೀಸ್ ಅಫೀಶಿಯಲ್ ಸ್ಟಾಕ್ ಕಮ್ಯೂನಿಟಿ ಎನ್ನುವ ಹೆಸರಿನಲ್ಲಿ ಡಿ.14ರಂದು ವಾಟ್ಸ್‌ಆ್ಯಪ್ ಸಂದೇಶ ಬಂದಿತ್ತು. ಬಳಿಕ ತಾನು ಆ ಗ್ರೂಪ್‌ಗೆ ಸೇರ್ಪಡೆಯಾದೆ. ಅದರಲ್ಲಿ ಬಂದ ಸಂದೇಶಗಳನ್ನು ನಂಬಿ ತಾನು ಐಪಿಒ ಸ್ಟಾಕ್‌ಗಳಿಗೆ ನೋಂದಣಿ ಮಾಡಿಸಿಕೊಂಡೆ. ನಂತರ ವಿವಿಧ ಐಪಿಒ ಮೊತ್ತದ ಸ್ಟಾಕ್‌ಗಳನ್ನು ಖರೀದಿ ಮಾಡಿದ್ದೆ. ಹಾಗೇ ಬೇರೆ ಬೇರೆ ಖಾತೆಗಳಿಂದ ಲಕ್ಷಾಂತರ ರೂ. ಮೊತ್ತವನ್ನು ಜಮೆ ಮಾಡಿದೆ. ಕೊನೆಗೆ ಇದು ಶೇರು ಮಾರುಕಟ್ಟೆಯ ಮೋಸದ ಜಾಲ ಎಂದು ತಿಳಿಯಿತು ಎಂದು ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ.
Next Story