ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಒಕ್ಕೂಟದ ಕಚೇರಿ ಉದ್ಘಾಟನೆ

ಮಂಗಳೂರು: ಸ್ತ್ರೀ ಜಾಗೃತಿ ಸಮಿತಿ ಹಾಗೂ ಗೃಹ ಕಾರ್ಮಿಕರ ಒಕ್ಕೂಟದ ಮಂಗಳೂರು ಕಚೇರಿಯನ್ನು ಕಾವೂರಿನ ಪೀಸ್ ಕೇವ್ ಕಟ್ಟಡದಲ್ಲಿ ಶಾಸಕ ಡಾ. ಭರತ್ ವೈ. ಶೆಟ್ಟಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸ್ತ್ರೀ ಜಾಗೃತಿ ಸಮಿತಿ ಹಾಗೂ ಗೃಹ ಕಾರ್ಮಿಕರ ಒಕ್ಕೂಟದ ಜೊತೆಗಿರುವೆ. ಹಿಂದುಳಿದ ಕಾರ್ಮಿಕರಿಗೆ ಸಹಕರಿಸುವುದು ಆದ್ಯ ಕರ್ತವ್ಯವಾಗಿದೆ. ಒಕ್ಕೂಟದ ಎಲ್ಲಾ ಯೋಜನೆಗಳಿಗೆ ಸಹಕಾರ ನೀಡುವೆ ಎಂದರು.
ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಪೋರೇಟರ್ ಶರತ್ ಕುಮಾರ್, ಕಾವೂರು ಪೊಲೀಸ್ ಠಾಣಾಧಿಕಾರಿ ನಳಿನಾಕ್ಷಿ, ಮಾಜಿ ಶಾಸಕ ಮೊಯ್ದಿನ್ ಬಾವ, ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಲತಾ ಆರ್. ಕೋಟ್ಯಾನ್, ದಂತ ವೈದ್ಯ ಡಾ.ಗಣೇಶ್ ಪ್ರಸಾದ್ ಬಿ., ರಂಗ ಸ್ವರೂಪದ ಅಧ್ಯಕ್ಷ ರೆಹ್ಮಾನ್ ಖಾನ್ ಕುಂಜತ್ತಬೈಲ್, ನಂದಿನಿ ಮಹಿಳಾ ಮಂಡಳದ ಅಧ್ಯಕ್ಷೆ ಗೀತಾ, ಗೌರವ ಸಲಹೆಗಾರ್ತಿ ಭಾರತಿ, ಮಂಗಳೂರು ಸ್ತ್ರೀ ಜಾಗೃತಿ ಸಮಿತಿ ಹಾಗೂ ಗೃಹ ಕಾರ್ಮಿಕರ ಒಕ್ಕೂಟದ ಸಂಚಾಲಕಿ ಸಂಶಾದ್ ಕುಂಜತ್ತಬೈಲ್, ನ್ಯಾಯವಾದಿ ಪ್ರಿಯಾ ಪುತ್ತೂರು, ಗೃಹ ಕಾರ್ಮಿಕರ ಒಕ್ಕೂಟದ ಅಧ್ಯಕ್ಷೆ ಸೀತಮ್ಮ, ಕಾರ್ಯದರ್ಶಿ ಕವಿತಾ, ಕಚೇರಿ ನಿರ್ವಾಹಕಿ ಹನೀಷಾ ಸವಾದ್ ಉಪಸ್ಥಿತರಿದ್ದರು.





