ಬಸ್ಸಿನಲ್ಲಿ ಕಳವು: ಪ್ರಕರಣ ದಾಖಲು

ಮಂಗಳೂರು, ಫೆ.6:ನಗರದ ಸ್ಟೇಟ್‌ಬ್ಯಾಂಕ್‌ನಿಂದ ಪಾಲ್ದನೆಗೆ ಚಲಿಸುತ್ತಿದ್ದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ನಗದು ಮತ್ತು ಚಿನ್ನದ ಸರವನ್ನು ಕಳವುಗೈದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.4ರಂದು ಮಧ್ಯಾಹ್ನ 2:50ರಿಂದ ಅಪರಾಹ್ನ 3:50ರ ಮಧ್ಯೆ ಯಶೋಧಾ ಎಂಬವರು ಸ್ಟೇಟ್‌ಬ್ಯಾಂಕನಿಂದ ಪಾಲ್ಡನೆಗೆ ರಾಜಲಕ್ಷ್ಮೀ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗಿನಲ್ಲಿದ್ದ ಸುಮಾರು 73,000 ರೂ. ಮೌಲ್ಯದ ಚಿನ್ನದ ಸರ ಮತ್ತು 8,000 ರೂ. ನಗದು ಕಳವಾಗಿರುವ ಬಗ್ಗೆ ದೂರು ನೀಡಲಾಗಿದೆ.
Next Story