ಮಂಗಳೂರು: ಮಹಾನಗರ ಪಾಲಿಕೆ ಕಟ್ಟಡ ಉಪವಿಧಿ ಪ್ರಕಟ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಕಟ್ಟಡ ಉಪವಿಧಿಗಳು 2025 ಕ್ಕೆ ಉಲ್ಲೇಖಿತ ಪತ್ರದನ್ವಯ ಸರಕಾರದಿಂದ ಅನುಮೋದನೆ ನೀಡಲಾಗಿರುತ್ತದೆ.
ಕೆಎಂಸಿ ಕಾಯ್ದೆ 1976ರ ಕಲಂ 426ರನ್ವಯ ಮಂಗಳೂರು ಮಹಾನಗರಪಾಲಿಕೆ ಕಟ್ಟಡ ಉಪವಿಧಿಗಳು -2025ನ್ನು ಮಂಗಳೂರು ಮಹಾನ ರಪಾಲಿಕೆಯ ನಗರ ಯೋಜನಾ ಶಾಖೆಯ ನೋಟೀಸ್ ಬೋರ್ಡಿನಲ್ಲಿ ಪ್ರಕಟಿಸಲಾಗಿದ್ದು, ಆಸಕ್ತರು ಪಾಲಿಕೆಗೆ ಭೇಟಿ ನೀಡಿ ಕಟ್ಟಡ ಉಪವಿಧಿಗಳನ್ನು ಪರಿಶೀಲಿಸಬಹುದಾಗಿದೆ. ರೂ.600 ಪಾವತಿಸಿ ಕಟ್ಟಡ ಉಪವಿಧಿಗಳ ಪ್ರತಿಯನ್ನು ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





