ಗಾಂಜಾ ಸೇವನೆ ಆರೋಪ: ಇಬ್ಬರ ಬಂಧನ

ಮಂಗಳೂರು, ಫೆ.10: ಬರ್ಕೆ ಮತ್ತು ಬಂದರು ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಣ್ಣಗುಡ್ಡೆ ದುರ್ಗಾಮಹಲ್ ಜಂಕ್ಷನ್ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೊಟ್ಟಾಯಂ ಜಿಲ್ಲೆ ಕರುಕಚಲ್ ತೊಪ್ಪಿಲ್ ಕೈಲಾತ್ ಕುಟ್ಟಪ್ಪಳ್ಳಿ ಮೂಲದ ಪ್ರಸಕ್ತ ನಗರದ ಕಾಪ್ರಿಗುಡ್ಡದಲ್ಲಿ ವಾಸವಾಗಿರುವ ಸೋನು ಸಾಜಿ (19) ಎಂಬಾತನನ್ನು ಬರ್ಕೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೊಯಿಕ್ಕೋಡ್ ಪೊಟ್ಟಮಲ್ ಕುತ್ತಿರವಟ್ಟಂ ನಿವಾಸಿ ಜಗನ್‌ಜಿತ್ ಕೆ.ಎಸ್. (21) ಎಂಬಾತನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
Next Story





