ಹಿಫ್ಲುಲ್ ಖುರಾನ್: ದಾಖಲಾತಿ ಆರಂಭ
ಮಂಗಳೂರು, ಫೆ.11: ಮಸ್ಜಿದ್ ಝೀನತ್ ಭಕ್ಷ್ ಕೇಂದ್ರ ಮಸೀದಿ ಹಾಗೂ ಈದ್ಗಾ ಮಸೀದಿ ಮಂಗಳೂರು ಇದರ ಅಧೀನದಲ್ಲಿ ನಗರದ ಬಂದರ್‌ನಲ್ಲಿ ಸುಮಾರು 14 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಖುರ್‌ಆನ್ ಹಿಫ್ಲ್ (ಕಂಠಪಾಠ) ಹಾಗೂ ಧಾರ್ಮಿಕ - ಲೌಕಿಕ ಶಿಕ್ಷಣದ ಅಶೈಖ್ ಅಸ್ಸೆಯ್ಯಿದ್ ಜಲಾಲ್ ಮಸ್ತಾನ್ ಮುಹಮ್ಮದ್ ಮೌಲಾ ಅಲ್‌ಬುಖಾರಿ (ಖ.ಸಿ.) ಹಿಫ್ಲುಲ್ ಖುರಾನ್ ಹಾಗೂ ಅರೆಬಿಕ್ ಕಾಲೇಜಿನ 2025-26ನೇ ಸಾಲಿನ ದಾಖಲಾತಿ ಪ್ರಾರಂಭವಾಗಿದೆ
ಮದ್ರಸದಲ್ಲಿ 5ನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತರು ಕಾಲೇಜು ಕಚೇರಿಯಿಂದ ಅರ್ಜಿ ಪಡೆದು ಮಾರ್ಚ್ 20ರೊಳಗೆ ಸಲ್ಲಿಸಬೇಕು. ಮಾಹಿತಿಗೆ ಮೊ.ಸಂ: 9019144555/7760727162/ 8904349708/ 8197119957ನ್ನು ಸಂಪರ್ಕಿಸಬಹುದು ಎಂದು ಝೀನತ್ ಭಕ್ಷ್ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





