'ದಿ ಅನ್ಸೀನ್ ಫ್ರೂಟ್ಸ್ ಆಫ್ ಇಬಾದ' ಪುಸ್ತಕ ಬಿಡುಗಡೆ

ಉಳ್ಳಾಲ: ಲೇಖಕರಲ್ಲಿ ಅಪಾರ ಜ್ಞಾನ ಇರುತ್ತದೆ. ಅದನ್ನು ಲೇಖಕರು ಕೃತಿ ರೂಪದಲ್ಲಿ ಹೊರ ತಂದಾಗ ಅವರ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ಹಿರಿಯ ಲೇಖಕ ಎ.ಕೆ. ಕುಕ್ಕಿಲ ಹೇಳಿದ್ದಾರೆ.
ಅವರು ಯುನಿಟಿ ಸಭಾಂಗಣದಲ್ಲಿ ನಡೆದ ಲುಜೈನ್ ಇಬ್ರಾಹೀಂ ರಹ್ಮತುಲ್ಲಾಹ್ ಬಬ್ಬುಕಟ್ಟೆ ಬರೆದ ಚೊಚ್ಚಲ ಕೃತಿ 'ದಿ ಅನ್ಸೀನ್ ಫ್ರೂಟ್ಸ್ ಆಫ್ ಇಬಾದ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಲೇಖಕ ಇಸ್ಮತ್ ಪಜೀರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಿ ಅನ್ಸೀನ್ ಫ್ರೂಟ್ಸ್ ಆಫ್ ಇಬಾದ' ಪುಸ್ತಕ ಬರೆದ ಲೇಖಕಿ ಲುಜೈನ್ ಇಬ್ರಾಹೀಂ ರಹ್ಮತುಲ್ಲಾಹ್ ಬಬ್ಬುಕಟ್ಟೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ನಾನು ಬರವಣಿಗೆ ಆರಂಭಿಸಿದ್ದೆ. ಹಲವು ವಿಚಾರಗಳನ್ನು ಕ್ರೋಡೀಕರಿಸಿ ಈ ಪುಸ್ತಕ ಬರೆದಿದ್ದು, ಇದು ನನ್ನ ಸಣ್ಣ ಪ್ರಯತ್ನ ಎಂದು ಹೇಳಿದರು.
ಹಿರಾ ಪಿಯು ಕಾಲೇಜು ಪ್ರಾಂಶುಪಾಲ ಫಾತಿಮಾ ಮೆಹರೂನ್, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಮುಹಮ್ಮದ್ ಇಸ್ಹಾಕ್ ಬಜಾಲ್, ಯು.ಎ.ಅಹ್ಮದ್ ಬಾವ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಸ್ಮಾನ್ ಹಂಗ್ಳೂರು, ಕುಂದಾಪುರ, ಮುಹಮ್ಮದ್ ಶರೀಫ್ ಸಾದ್ ಸೂರಲ್ಪಾಡಿ, ಯು.ಎ.ಇಬ್ರಾಹೀಂ ಕೋಟೆಕಾರ್, ಮುಹಮ್ಮದ್ ಅಶ್ರಫ್ ಹಮ್ಮಬ್ಬ, ಮುಹಮ್ಮದ್ ಹಾಶಿಮ್ ತಾಹಾ ಉಪಸ್ಥಿತರಿದ್ದರು.
ಮುಹಮ್ಮದ್ ಸಿದ್ದೀಕ್ ಜಕ್ರಿಬೆಟ್ಟು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಝಮ್ಮಿಲ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.







