ಜರ್ಮನಿ ಬವೇರಿಯಾ ಸಂಸತ್ತಿನ ನಿಯೋಗ ಕರ್ನಾಟಕ ವಿಧಾನ ಸಭೆಗೆ ಭೇಟಿ

ಮಂಗಳೂರು: ಜರ್ಮನಿ ದೇಶದ ಬವೇರಿಯಾ ಸಂಸತ್ತಿನ ‘ಕಮಿಟಿ ಫಾರ್ ಇಂಟರ್ನಲ್ ಸೆಕ್ಯುರಿಟಿ ಆ್ಯಂಡ್ ಮುನ್ಸಿಫಲ್ ಆಫೆರ್ಸ್ ಆ್ಯಂಡ್ ಸ್ಪೋರ್ಟ್ಸ್ ’ ಕಮಿಟಿಯ ಉಪಾಧ್ಯಕ್ಷ ಫ್ಲೋರಿಯನ್ ಸಿಕ್ಮನ್ ನೇತೃತ್ವದ 23 ಸದಸ್ಯರುಗಳ ನಿಯೋಗವು ಗುರುವಾರ ಬೆಳಗ್ಗೆ ವಿಧಾನ ಸೌಧಕ್ಕೆ ಭೇಟಿ ನೀಡಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ವಿಧಾನ ಮಂಡಲದ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳೊಂದಿಗೆ ಸಭೆ ನಡೆಸಿದರು.
ಬವೇರಿಯಾ ಸಂಸತ್ತಿನ ಮತ್ತು ಕರ್ನಾಟಕ ವಿಧಾನ ಸಭೆಯ ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಮಾಹಿತಿ ಪಡೆದರು.
ಕರ್ನಾಟಕ ಮತ್ತು ಬವೇರಿಯಾ ಸಂಸತ್ತಿನ ನಡುವೆ ಅತ್ಯುತ್ತಮ ನಡವಳಿಗಳ ಕುರಿತು ಪರಸ್ಪರ ವಿನಿಮಯ ಮಾಡಿಕೊಳ್ಳಬ ಹುದಾಗಿದೆ ಎಂದು ಸಭಾಧ್ಯಕ್ಷರು ತಿಳಿಸಿರುವುದಾಗಿ ಪ್ರಕಟನೆ ತಿಳಿಸಿದೆ.
Next Story