ಬೈಕಂಪಾಡಿ: ನವೀಕೃತ ಮಸೀದಿ ಉದ್ಘಾಟನೆ

ಮಂಗಳೂರು,ಫೆ.14: ಬೈಕಂಪಾಡಿಯ ಮೊಹಿಯುದ್ದೀನ್ ಜುಮಾ ಮಸೀದಿ ಮುಸ್ಲಿಂ ಜಮಾಅತ್‌ನ ನವೀಕೃತ ಮಸೀದಿ ಉದ್ಘಾಟನಾ ಕಾರ್ಯಕ್ರಮವು ಗುರುವಾರ ನಡೆಯಿತು.
ಡಾ.ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್-ಅಹ್ದಲ್ ಮುತ್ತನ್ನೂರು ತಂಙಳ್ ನವೀಕರಿಸಿದ ಮಸೀದಿಯನ್ನು ಉದ್ಘಾಟಿಸಿದರು. ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ. ಆರ್. ರಶೀದ್ ಹಾಜಿ, ಮಸೀದಿಯ ಖತೀಬ್ ಎನ್.ಎಚ್. ಯಾಕೂಬ್ ಮದನಿ ಅಲ್-ಪುರ್ಕಾನಿ, ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ಜಲೀಲ್ ಕೃಷ್ಣಾಪುರ, ಅಖಿಲ ಭಾರತ ಬಂದರು ಮತ್ತು ದಕ್ಕೆ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಅಬೂಬಕ್ಕರ್, ಉದ್ಯಮಿ ಹಾಜಿ ಬಿ.ಎಚ್. ಅಸ್ಗರ್ ಅಲಿ, ಮಸೀದಿಯ ಉಪಾಧ್ಯಕ್ಷ ಚೈಬಾವಾಕ, ಕೋಶಾಧಿಕಾರಿ ಫಾರೂಕ್, ಸದಸ್ಯರಾದ ಮುಕ್ತಾರ್, ರಫೀಕ್, ಯಾಹ್ಯಾ, ಚೈಯಾಕ, ಇರ್ಫಾನ್, ಸಾಮಾಜಿಕ ಕಾರ್ಯಕರ್ತ ಇಬ್ರಾಹಿಂ ಗೊಳಿಕಟ್ಟೆ ಉಪಸ್ಥಿತರಿದ್ದರು. ಮಸೀದಿಯ ಕಾರ್ಯದರ್ಶಿ ಮುಹಮ್ಮದ್ ಹಸನ್ ಶಮೀರ್ ಕಾರ್ಯಕ್ರಮ ನಿರೂಪಿಸಿದರು.





