ಗಾಂಜಾ ಸೇವನೆ ಆರೋಪ: ಮೂವರ ಸೆರೆ

ಮಂಗಳೂರು: ನಗರದ ಕದ್ರಿ, ಮಂಗಳೂರು ಗ್ರಾಮಾಂತರ, ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ಆರೋಪಕ್ಕೆ ಸಂಬಂದಿಸಿ ಮೂವರನ್ನು ಬಂಧಿಸಲಾಗಿದೆ.
*ನಂತೂರು ಜಂಕ್ಷನ್ ಬಳಿ ಅಮಲು ಪದಾರ್ಥ ಸೇವಿಸಿದ್ದ ಗರೋಡಿಯ ಪ್ರಥಮ್ ರಾಜ್ (19) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
*ಅಡ್ಯಾರು ಪದವು ಬಳಿ ಮಾದಕ ವಸ್ತು ಸೇವಿಸಿದ್ದ ಅಡ್ಯಾರ್ ಪದವು ನಿವಾಸಿ ಇರ್ಷಾದ್ (23) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
*ಬಂದರ್ ದಕ್ಷಿಣ ಮೀನುಗಾರಿಕ ದಕ್ಕೆಯಲ್ಲಿ ಅಮಲು ಪದಾರ್ಥ ಸೇವಿಸಿದ್ದ ಕುಂಪಲ ನಿವಾಸಿ ಧನುಷ್ (28) ಎಂಬಾತನನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story





