ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾಗಿ ಐವನ್ ಡಿಸಿಲ್ವ ನೇಮಕ

ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಗೆ ನೂತನ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿನಿಮಾ ತಂತ್ರಜ್ಞ, ರಂಗ ಭೂಮಿ ಕಲಾವಿದ ನಿರ್ದೇಶಕ , ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯ (ಸೆಲೆಕ್ಷನ್ ಗ್ರೇಡ್) ನಿವೃತ್ತ ಉಪನ್ಯಾಸಕ ಐವನ್ ಡಿ ಸಿಲ್ವ ಸಹಿತ ಏಳು ಮಂದಿ ಸದಸ್ಯರು ನೇಮಕ ಗೊಂಡಿರುತ್ತಾರೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಯ ಸದಸ್ಯರು ಗಳನ್ನಾಗಿ ಸಾಮಾನ್ಯ ಸಮಿತಿಗೆ ರಾಜ್ಯ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ನೇಮಿಸಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಾಮಾನ್ಯ ಸಮಿತಿಗೆ ಪತ್ರಿಕೋದ್ಯಮ, ಸಿನಿಮಾ ಕ್ಷೇತ್ರದ ಪ್ರತಿನಿಧಿಗಳನ್ನು ಸಾಮಾನ್ಯ ಸಮಿತಿಗೆ ಸದಸ್ಯರನ್ನು ನೇಮಕ ಮಾಡಲಾಗಿದೆ. ಹಿರಿಯ ಪತ್ರಕರ್ತರಾದ ಸಾವಿತ್ರಿ ಮಜುಂದಾರ್, ಚಿದಾನಂದ ಪಟೇಲ್, ಸಿನಿಮಾ ವಿಶ್ಲೇಷಕ ದೇಶಾದ್ರಿ. ಎಚ್, ಸಿನಿಮಾ ಕಲಾವಿದೆ ನಿಖಿತಾಸ್ವಾಮಿ. ಎಸ್, ಸಿನಿಮಾ ಪ್ರಚಾರಕರಾದ ಡಿ.ಜಿ.ವೆಂಕಟೇಶ್, ಚಿತ್ರೋದ್ಯಮಿ ವಿಷ್ಣು ಕುಮಾರ್ ಅವರನ್ನು ನೂತನ ಸದಸ್ಯರನ್ನಾಗಿ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.







