ಡಾ.ಶಿಶಿಲರಿಗೆ ಕ.ಸಾ.ಪ. ಜಿಲ್ಲಾಧ್ಯಕ್ಷರಿಂದ ಸಮ್ಮೇಳನದ ಆಮಂತ್ರಣ ಪತ್ರ ನೀಡಿ ಆಹ್ವಾನ

ಮಂಗಳೂರು: ಫೆ.21 ಮತ್ತು 22 ರಂದು ಮಂಗಳೂರಿನ ವಿ.ವಿ. ಆವರಣದಲ್ಲಿ ನಡೆಯುವ ದ.ಕ.ಜಿಲ್ಲಾ 27 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪ್ರಭಾಕರ ಶಿಶಿಲರಿಗೆ ಕ.ಸಾ.ಪ. ವತಿಯಿಂದ ಅಧಿಕೃತವಾಗಿ ಆಮಂತ್ರಣ ಪತ್ರ ನೀಡಿ ಆಹ್ವಾನಿಸುವ ಕಾರ್ಯಕ್ರಮ ಶನಿವಾರ ನಡೆಯಿತು.
ಜಿಲ್ಲಾ ಕಸಾ.ಪ. ಅಧ್ಯಕ್ಷ ಡಾ. ಎಂ.ಪಿ.ಶ್ರೀನಾಥ್ ರವರು ಡಾ.ಶಿಶಿಲರಿಗೆ ಸಮ್ಮೇಳನದ ಆಮಂತ್ರಣ ಪತ್ರವನ್ನು ನೀಡಿ ಆಹ್ವಾನಿಸಿದರಲ್ಲದೆ, ಶಿಶಿಲ ದಂಪತಿಗೆ ಶಾಲು ಹೊದಿಸಿ ಫಲಪುಷ್ಪಗಳನ್ನಿತ್ತು ಗೌರವಿಸಿದರು.
ಆಮಂತ್ರಣ ಸ್ವೀಕರಿಸಿ ಮಾತನಾಡಿದ ಡಾ.ಪ್ರಭಾಕರ ಶಿಶಿಲರು ‘‘ಜಿಲ್ಲಾ ಸಾಹಿತ್ಯ ಪರಿಷತ್ತು ನನಗೆ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ನೀಡಿ ಗೌರವಿಸಿರುವುದು ಸಂತೋಷವನ್ನುಂಟು ಮಾಡಿದೆ. ಸುಳ್ಯಕ್ಕೆ ಮೂರನೇ ಬಾರಿ ಈ ಜಿಲ್ಲಾಧ್ಯಕ್ಷತೆ ದೊರೆತಂತಾಗಿದೆ. ಪ್ರಥಮವಾಗಿ ಪ್ರೊ.ಕೋಡಿ ಕುಶಾಲಪ್ಪ ಗೌಡರಿಗೆ, ಬಳಿಕ ಸುಬ್ರಾಯ ಚೊಕ್ಕಾಡಿಯವರಿಗೆ, ಈಗ ನನಗೆ ಈ ಗೌರವ ದೊರೆತಿದೆ’’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶೈಲಿ ಪ್ರಭಾಕರ್, ಕಸಾಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಜಿಲ್ಲಾ ಕಸಾಪ ಕಾರ್ಯಕಾರಿಣಿ ಸದಸ್ಯ ಹರೀಶ್ ಬಂಟ್ವಾಳ್, ಬೆಳ್ತಂಗಡಿಯ ಆಯುಷ್ .ಟಿ.ಎಂ, ಪುನೀತ್ ಎಸ್.ಟಿ., ಮಹೇಂದ್ರ ಹಡಗಲಿ ಉಪಸ್ಥಿತರಿದ್ದರು.





