ಕರ್ನಾಟಕ ರಾಜ್ಯ ಜಂಇಯ್ಯತುಲ್ ಇರ್ಫಾನಿಯೀನ್ ಅಧ್ಯಕ್ಷರಾಗಿ ಶೈಕ್ ಮುಹಮ್ಮದ್ ಇರ್ಫಾನಿ ಪುನರಾಯ್ಕೆ

ಮುಹಮ್ಮದ್ ಇರ್ಫಾನಿ
ಮಂಗಳೂರು: ಶೈಖುನಾ ಚಪ್ಪಾರಪಡವು ಉಸ್ತಾದರ ಮಾರ್ಗದರ್ಶನದಲ್ಲಿ ರೂಪೀಕರಿಸಲಾದ ಕರ್ನಾಟಕ ಜಂಇಯ್ಯತುಲ್ ಇರ್ಫಾನಿಯೀನ್ ಸಂಘಟನೆಯ ಮಹಾಸಭೆಯು ಫೆ. 11ರಂದು ಮೌಲ ಮೆಮೋರಿಯಲ್ ಅಕಾಡಮಿಯಲ್ಲಿ ನಡೆಯಿತು.
ಕೇಂದ್ರ ಸಮಿತಿ ಸದಸ್ಯ ಉಬೈದುಲ್ಲಾ ಫೈಝಿ ಇರ್ಫಾನಿ ಅಲ್ ಅಝ್ಝರಿ ಸಭೆಯ ನೇತೃತ್ವ ವಹಿಸಿದ್ದರು. ಯಾಕೂಬ್ ಫೈಝಿ ಇರ್ಫಾನಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಸೈಯ್ಯದ್ ಶರೀಫ್ ತಂಙಲ್ ಇರ್ಫಾನಿ ಹಿತೋಪದೇಶ ನೀಡಿದರು. ಶೈಖ್ ಮುಹಮ್ಮದ್ ಫೈಝಿ ಇರ್ಫಾನಿ ಅಧ್ಯಕ್ಷತೆ ವಹಿಸಿದ್ದರು. ಸವಾದ್ ಫೈಝಿ ಇರ್ಫಾನಿ ಶುಭ ಹಾರೈಸಿದರು. ಮೌಲಾ ಅಕಾಡೆಮಿ ಮುದರ್ರಿಸರಾದ ಅಬ್ದುಲ್ ಅಝೀಝ್ ಇರ್ಫಾನಿ, ಮಸೂದ್ ಇರ್ಫಾನಿ, ಬಿಲಾಲ್ ಇರ್ಫಾನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
2025ರ -2026ರ ಸಾಲಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಶೈಖ್ ಮುಹಮ್ಮದ್ ಫೈಝಿ ಇರ್ಫಾನಿ ಮುದರ್ರಿಸ್ ಪಲ್ಲಂಗೊಡು ಪುನರಾಯ್ಕೆ ಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕೊಳ್ತಿಗೆ ಮುದರ್ರಿಸ್ ಇಲ್ಯಾಸ್ ಇರ್ಫಾನಿ, ಕೋಶಾಧಿಕಾರಿಯಾಗಿ ಕಡಂಬಾರ್ ಮುದರ್ರಿಸ್ ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಸೈಯ್ಯದ್ ಶರೀಫ್ ತಂಙಲ್, ಅಬ್ದುಲ್ ಅಝೀಝ್ ಇರ್ಫಾನಿ , ಜೊತೆ ಕಾರ್ಯದರ್ಶಿಗಳಾಗಿ ಶಂಸುದ್ದೀನ್ ಇರ್ಫಾನಿ ಕೊಡಗು, ಬಾದುಶಾ ಇರ್ಫಾನಿ ಸಾಲ್ಮರ ಮತ್ತು ಯೂನಸ್ ಇರ್ಫಾನಿ ಕೆರೆಮೂಲೆ.
ಇಕ್ಬಾಲ್ ಇರ್ಫಾನಿ ಮುಂಡೋಳೆ, ಅಬ್ದುಲ್ ಹಮೀದ್ ಇರ್ಫಾನಿ, ಶಾಫಿ ಮೌಲವಿ, ಸ್ವಲಾಹುದ್ದೀನ್ ಇರ್ಫಾನಿ, ಹೈದರ್ ಇರ್ಫಾನಿ, ಮುಸ್ತಫ ಇರ್ಫಾನಿ, ನಿಝಾಂ ಇರ್ಫಾನಿ, ತ್ವಾಹ ಇರ್ಫಾನಿ, ಅಲಿ ಇರ್ಫಾನಿ, ಜವಾದ್ ಇರ್ಫಾನಿ ದೇರಳಕಟ್ಟೆ ಇವರನ್ನೊಳಗೊಂಡ ಒಟ್ಟು 20 ಸದಸ್ಯರ ನೂತನ ಸಮಿತಿಯನ್ನು ರಚಿಸಲಾಯಿತು.
ಸಲೀಂ ಫೈಝಿ ಇರ್ಫಾನಿ ಸ್ವಾಗತಿಸಿದರು, ಇಲ್ಯಾಸ್ ಇರ್ಫಾನಿ ಸಾಲ್ಮರ ವಂದಿಸಿದರು.