ಬೈಕ್ ಸ್ಕಿಡ್: ಗಾಯಾಳು ಮಹಿಳೆ ಮೃತ್ಯು

ಮಂಗಳೂರು, ಫೆ.19: ಬೈಕ್ ಸ್ಕಿಡ್ಡಾಗಿ ರಸ್ತೆಗೆ ಉರುಳಿದ ಪರಿಣಾಮ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವ ಬಗ್ಗೆ ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.15ರಂದು ಜಲಜಾ (54) ಎಂಬವರು ದೇಲಂತಬೆಟ್ಟು ಅಂಚೆ ಕಚೇರಿಗೆ ಹೋಗಲು ತನ್ನ ಮಗ ಸುಜಿತ್‌ನ ಬೈಕ್‌ನಲ್ಲಿ ತೆರಳುತ್ತಿದ್ದರು. ಬೈಕನ್ನು ಸುಜಿತ್‌ನ ಸ್ನೇಹಿತ ಚೇತನ್ ಚಲಾಯಿಸುತ್ತಿದ್ದ. ರಾಜೀವನಗರ ಎಂಬಲ್ಲಿ ಮಧ್ಯಾಹ್ನ 12ರ ವೇಳೆಗೆ ಸವಾರನ ನಿಯಂತ್ರಣ ತಪ್ಪಿದ ಬೈಕ್‌ನ ಹಿಂಬದಿ ಕುಳಿತಿದ್ದ ಜಲಜಾ ಬಿದ್ದು ಗಂಭೀರ ಗಾಯಗೊಂಡಿದ್ದರು.ತಕ್ಷಣ ಕಟೀಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Next Story